![](https://kannadadunia.com/wp-content/uploads/2019/02/2000_5c74d8ba1dacf.jpg)
ವಾಸ್ತು ಶಾಸ್ತ್ರದಲ್ಲಿ ಶ್ರೀಮಂತನಾಗುವುದು ಹೇಗೆ ಎಂಬುದನ್ನು ಹೇಳಲಾಗಿದೆ. ಸಾಕಷ್ಟು ಉಪಾಯಗಳನ್ನು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗೆ ವ್ಯಾಪಾರಿ ರಾತ್ರೋರಾತ್ರಿ ಹಣ ಸಂಪಾದನೆ ಮಾಡುವುದು ಹೇಗೆ ಎಂಬುದನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಒಂದು ಸಣ್ಣ ಉಪಾಯ ನಿಮ್ಮನ್ನು ಧನವಂತನಾಗಿ ಮಾಡಬಹುದು.
ವ್ಯವಹಾರದಲ್ಲಿ ಯಶಸ್ವಿಯಾಗಿ ಹಣ ಗಳಿಸುವ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಸರಳ ಉಪಾಯವಿದೆ. ಇದಕ್ಕೆ ಕೇವಲ 2000 ರೂಪಾಯಿ ನೋಟು ಬೇಕು. 2000 ರೂಪಾಯಿ ನೋಟನ್ನು ಕಪ್ಪು ಬ್ಯಾಗ್ಗ್ರೌಂಡ್ ಹೊಂದಿರುವ ಬೆಳ್ಳಿ ಬಣ್ಣದ ಫ್ರೇಮ್ ಒಳಗೆ ಇಡಬೇಕು. ಈ ಫೋಟೋ ಫ್ರೇಮ್ ನ ಮೇಲೆ ಅಥವಾ ಕೆಳಗೆ ಕುಬೇರನ ಮೂರ್ತಿಯನ್ನು ಅಂಟಿಸಬೇಕು.
ಇದನ್ನು ವ್ಯಾಪಾರದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಇಟ್ಟರೆ ಶೀಘ್ರವೇ ಫಲ ಪ್ರಾಪ್ತಿಯಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೂರ್ವ ದಿಕ್ಕನ್ನು ಹಣಕ್ಕೆ ಮೀಸಲಿಡಲಾಗಿದೆ. ಪೂರ್ವ ದಿಕ್ಕಿನಲ್ಲಿ ಕುಬೇರನ ಫೋಟೋ ಹಾಕಿದ್ರೆ ಧನ ಲಾಭವಾಗಲಿದೆ. ಫೋಟೋ ಫ್ರೇಮನ್ನು ಕೂಡ ಈ ದಿಕ್ಕಿನಲ್ಲಿಟ್ಟರೆ ಶುಭವಾಗಲಿದೆ.