ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆಹಾರದ ವಿಡಿಯೋಗಳಿಗೂ ಇಲ್ಲಿ ಯಾವುದೇ ಕೊರತೆಯಿಲ್ಲ. ವಿವಿಧ ಶೈಲಿಯ ಪಾಕ ವಿಧಾನಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. ಇದೀಗ ವೈರಲ್ ಆಗಿರುವ ಪಾಕವಿಧಾನವೆಂದರೆ ದೋಸೆ.
ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ದೋಸೆ ಬಹಳ ಜನಪ್ರಿಯತೆಯನ್ನು ಪಡೆದಿರುವ ಖಾದ್ಯ. ಇದೀಗ ಈ ದೋಸೆಯನ್ನು ಬಾಣಸಿಗನೊಬ್ಬ ವಿಭಿನ್ನವಾಗಿ ತಯಾರಿಸಿರುವ ವಿಡಿಯೋ ವೈರಲ್ ಆಗಿದೆ. ಅಹಮದಾಬಾದ್ ಮೂಲದ ಆಹಾರ ಬ್ಲಾಗರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹಿಜಾಬ್ ವಿವಾದ ಕುರಿತು ಅಮಿತ್ ಶಾ ಪ್ರತಿಕ್ರಿಯೆ, ಸಮವಸ್ತ್ರ ಪಾಲನೆ ಅಗತ್ಯ
ತ್ರಿಕೋನಾಕಾರದ ಮೂಗು, ಎರಡು ಕಣ್ಣುಗಳು ನಗೆಬೀರಿದ ತುಟಿ, ಶಂಕುವಿನಾಕಾರದ ಮುಖವಾಡದಂತೆ ಹೋಲುವ ದೋಸೆಯನ್ನು ಬಾಣಸಿಗ ತಯಾರಿಸಿದ್ದಾರೆ. ಈ ಯೂನಿಕ್ ದೋಸೆಯನ್ನು ಮೆಹ್ಸಾನಾದ ಖೌ ಗಲಿ ದೋಸಾದಲ್ಲಿ ತಯಾರಿಸಲಾಗಿದೆ. ಈ ವಿಶಿಷ್ಟ ದೋಸೆಯನ್ನು ಸೂರತ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ನೀಡಲಾಗುತ್ತದೆ
ಈ ದೋಸೆಯನ್ನು ವಿಶೇಷವಾಗಿ ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಆಹಾರ ಪ್ರಿಯ ಬ್ಲಾಗರ್ ತಿಳಿಸಿದ್ದಾರೆ. ಈ ವಿಶಿಷ್ಟ ದೋಸೆಯನ್ನು ನೋಡಿದ ಬಳಕೆದಾರರೊಬ್ಬರು ಕೋಯಿ ಮಿಲ್ ಗಯಾ ಚಿತ್ರದ ಜಾದೂವಿನಂತೆ ಇದು ತೋರುತ್ತದೆ ಎಂದು ಹೇಳಿದ್ದರೆ, ಮತ್ತೊಬ್ಬರು ಭಯಾನಕ ದೋಸೆ ಎಂದು ಲೇವಡಿ ಮಾಡಿದ್ದಾರೆ.