![](https://kannadadunia.com/wp-content/uploads/2020/09/hoxton-southwark-hotel-interiors-ennismore-london_dezeen_2364_hero-852x479-1.jpg)
ಮನೆಯಲ್ಲಿರುವ ಟಾಯ್ಲೆಟ್ ಕ್ಲೀನ್ ಆಗಿದ್ದರೆ ಮನಸ್ಸಿಗೆ ನೆಮ್ಮದಿ. ಟಾಯ್ಲೆಟ್ ಎಷ್ಟೇ ಕ್ಲೀನ್ ಮಾಡಿದರೂ ಒಂದು ರೀತಿ ವಾಸನೆ ಬರುತ್ತಿರುತ್ತದೆ. ಅದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಟಿಪ್ಸ್ ಇದೆ ಟ್ರೈ ಮಾಡಿ ನೋಡಿ.
* ಟಾಯ್ಲೆಟ್ ನಲ್ಲಿ ಜಾಸ್ತಿ ಗಾಳಿ ಬೆಳಕು ಇರುವ ಹಾಗೇ ನೋಡಿಕೊಳ್ಳಿ. ಕಿಟಕಿ ಇದ್ದರೆ ಅದನ್ನು ಮುಚ್ಚಬೇಡಿ. ಆದಷ್ಟು ತೆರೆದೆ ಇದ್ದರೆ ಒಳ್ಳೆಯದು.
*ಟಾಯ್ಲೆಟ್ ಪೇಪರ್ ರೋಲ್ ಗೆ 4ರಿಂದ 5 ಹನಿಗಳಷ್ಟು ನಿಮ್ಮಿಷ್ಟದ ಎಸೆನ್ಸಿಯಲ್ ಆಯಿಲ್ ಹಾಕಿ. ಇದರಿಂದ ಟಾಯ್ಲೆಟ್ ಪೇಪರ್ ತೆಗೆಯುವಾಗ ಈ ಪರಿಮಳ ಇಡೀ ಬಾತ್ ರೂಂ ತುಂಬಾ ಪಸರಿಸುತ್ತದೆ.
* ಟಾಯ್ಲೆಟ್ ನ ಟ್ಯಾಂಕ್ (ಪ್ಲಶ್ ಬಟನ್ ಹತ್ತಿರ ನೀರು ತುಂಬಿರುವಂತಹ ಟ್ಯಾಂಕ್) ಗೆ ಯಾವುದಾದರೂ ಫ್ಯಾಬ್ರಿಕ್ ಸಾಫ್ಟ್ ನರ್ ಅಥವಾ ಲಿಕ್ವಿಡ್ ಡಿಟರ್ಜೆಂಟ್ 2 ಮುಚ್ಚಳ ಹಾಕಿ. ಅಥವಾ ಎಸೆನ್ಸಿಯಲ್ ಆಯಿಲ್ 2 ಹನಿ ಹಾಕಿ. ಫ್ಲಶ್ ಮಾಡುವಾಗ ಪರಿಮಳ ಬರುತ್ತದೆ.
ಇನ್ನು ಲಿಂಬೆಹಣ್ಣನ್ನು ಕತ್ತರಿಸಿ ಇದನ್ನು ನಿಮ್ಮ ಟಾಯ್ಲೆಟ್ ನಲ್ಲಿ ಎಲ್ಲಾದರೂ ಇಡುವುದರಿಂದ ಫ್ರೆಶ್ ಪರಿಮಳ ಬೀರುತ್ತದೆ.