ಮೆಂತ್ಯ ಕಾಳಿನಂತೆ ಅದರ ಸೊಪ್ಪು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಿಂದ ಕೊಂಡು ತಂದು ತಿನ್ನುವುದಕ್ಕಿಂತ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು.
ಒಂದು ಪಾಟ್ ಗೆ ಮಣ್ಣು ಹಾಗೂ ಗೊಬ್ಬರವನ್ನು ಸೇರಿಸಿ. ರಾತ್ರಿಯಿಡೀ ನೆನೆಸಿಟ್ಟ ಮೆಂತ್ಯಬೀಜಗಳನ್ನು ಮಣ್ಣಿನ ಮೇಲೆ ಸಿಂಪಡಿಸಿ. ಅದರ ಮೇಲೆ ಸ್ವಲ್ಪ ಮಣ್ಣನ್ನು ಹಾಕಿ ಮುಚ್ಚಿ. 3-4 ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ.
ಮೊಳಕೆಯೊಡೆದ ಬಳಿಕ ಪಾಟ್ ಅನ್ನು ಸೂರ್ಯ ಬೆಳಕಿನಲ್ಲಿ ಇಡಿ. ಯಾಕೆಂದರೆ ಮೆಂತ್ಯ ಗಿಡ ಬೆಳೆಯಲು 3 -4 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕಾಗುತ್ತದೆ. ಪ್ರತಿದಿನ ನೀರನ್ನು ಹಾಕಿ. 1 ತಿಂಗಳ ನಂತರ ಮೆಂತ್ಯ ಸೊಪ್ಪನ್ನು ಕೀಳಬಹುದು.