ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ ಸಂಕೇತ ನೀಡುತ್ತದೆಯಂತೆ. ನಿಮಗೂ ಇಂಥ ಕನಸು ಬಿದ್ರೆ ಮುಂದೆ ಆರ್ಥಿಕ ವೃದ್ಧಿಯಾಗಲಿದೆ ಎಂದು ಅರ್ಥೈಸಿಕೊಳ್ಳಿ.
ಬೆಳಗಿನ ಜಾವದ ಸ್ವಪ್ನದಲ್ಲಿ ಇರುವೆಯ ಸಾಲು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗ್ತಿದ್ದಂತೆ ಕಂಡ್ರೆ ಶೀಘ್ರವೇ ಆರ್ಥಿಕ ವೃದ್ಧಿಯಾಗಲಿದೆ ಎಂದರ್ಥ.
ಕನಸಿನಲ್ಲಿ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿದಂತೆ ಕಂಡ್ರೆ ಅದೂ ಶುಭಕರ. ದೇವಸ್ಥಾನದಲ್ಲಿ ಕಳಶ ಕಂಡ್ರೆ ಲಕ್ಷ್ಮಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದೇ ಅರ್ಥ.
ಕನಸಿನಲ್ಲಿ ತೆಂಗಿನಕಾಯಿ ತಿನ್ನುವಂತೆ ಕಂಡ್ರೆ ಆದಷ್ಟು ಬೇಗ ನಿಮ್ಮ ಕಪಾಟಿನಲ್ಲಿ ಹಣ ತುಂಬುತ್ತದೆ.
ಸಣ್ಣ ಮಗು ತುಂಟಾಟವಾಡ್ತಿರುವುದು ಕನಸಿನಲ್ಲಿ ಕಂಡ್ರೆ ಅದು ಶುಭ ಸಂಕೇತ. ಆರ್ಥಿಕ ವೃದ್ಧಿಯಾಗುವ ಮುನ್ಸೂಚನೆ.
ಕನಸಿನಲ್ಲಿ ಹಸುವಿನ ಹಾಲನ್ನು ಕರು ಕುಡಿಯುತ್ತದಂತೆ ಕಂಡ್ರೆ ಅದು ಶುಭಕರ.
ನಾಯಿ ಕಚ್ಚಿದಂತೆ ಕನಸು ಬಿದ್ರೆ ಹೆದ್ರಬೇಕಾಗಿಲ್ಲ. ಆರ್ಥಿಕ ವೃದ್ಧಿಗೆ ಇದು ಸಂಕೇತ.
ಬೆಳಗಿನ ಕನಸಿನಲ್ಲಿ ಆಕಳು ಕಾಣಿಸಿಕೊಂಡ್ರೆ ಕೂಡ ವ್ಯಕ್ತಿ ಶೀಘ್ರ ಧನವಂತನಾಗ್ತಾನೆ ಎಂದರ್ಥ.