ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಅತ್ಯಂತ ಅಪಾಯಕಾರಿ ಕಾಯಿಲೆಗಳಲ್ಲೊಂದು. ಸ್ತನ ಕ್ಯಾನ್ಸರ್ ಗಂಭೀರ ಸಮಸ್ಯೆಯಾಗಿದ್ದರೂ ಸಮಯಕ್ಕೆ ಸರಿಯಾಗಿ ರೋಗ ಲಕ್ಷಣಗಳನ್ನು ಅರ್ಥಮಾಡಿಕೊಂಡರೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಹಾಗಾಗಿ ಸ್ತನ ಕ್ಯಾನ್ಸರ್‌ನ ಮೊದಲ ಐದು ಲಕ್ಷಣಗಳು ಯಾವುವು ಎಂದು ತಿಳಿಯೋಣ.
ನಿಪ್ಪಲ್ ಆಕಾರದಲ್ಲಿ ಬದಲಾವಣೆ : ಸ್ತನ ಕ್ಯಾನ್ಸರ್‌ನ ಪ್ರಮುಖ ಲಕ್ಷಣವೆಂದರೆ ಮೊಲೆತೊಟ್ಟುಗಳಲ್ಲಿ ಬದಲಾವಣೆ. ಅದೇನಾದ್ರೂ ನಿಮ್ಮ ಗಮನಕ್ಕೆ ಬಂದಲ್ಲಿ ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಮುಟ್ಟಿನ ದಿನದವರೆಗೂ ಸ್ತನಗಳಲ್ಲಿ ನೋವು : ಮುಟ್ಟಿನ ದಿನಗಳು ಸಮೀಪ ಬಂದಂತೆಲ್ಲ ಕೆಲವರಿಗೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ವಿಪರೀತವಾಗಿದ್ದರೆ, ಋತುಸ್ರಾವ ಆಗುವವರೆಗೂ ಈ ನೋವು ಇದ್ದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕು.
ಸ್ತನದಲ್ಲಿ ಗಡ್ಡೆಗಳು: ಸ್ತನಗಳಲ್ಲಿ ಚಿಕ್ಕ ಚಿಕ್ಕ ಗಡ್ಡೆಯಂತಾಗಬಹುದು. ಅಥವಾ ಗಂಟುಗಳಂತಾಗಿದ್ದರೆ ಕೂಡಲೇ ವೈದ್ಯರಿಂದ ಪರಿಶೀಲನೆ ಮಾಡಿಸಿಕೊಳ್ಳಿ. ಯಾಕಂದ್ರೆ ಈ ರೀತಿ ಸ್ತನಗಳಲ್ಲಿ ಗಂಟಾಗುವುದು ಕೂಡ ಕ್ಯಾನ್ಸರ್‌ನ ಆರಂಭಿಕ ಲಕ್ಷಣವೇ ಆಗಿದೆ.
ಸ್ತನಗಳಲ್ಲಿ ಊತ: ನಿಮ್ಮ ಸ್ತನಗಳಲ್ಲಿ ಕೆಂಪಗಿನ ಕಲೆಗಳು, ಊತ, ಚರ್ಮದ ಕಿರಿಕಿರಿ, ತುರಿಕೆ ಅಥವಾ ದದ್ದು ಇದ್ದರೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಇವೆಲ್ಲವೂ ಸ್ತನ ಕ್ಯಾನ್ಸರ್‌ನ ಪ್ರಾರಂಭಿಕ ರೋಗಲಕ್ಷಣಗಳೇ ಆಗಿವೆ.
ನಿಪ್ಪಲ್‌ನಿಂದ ಹಾಲು ಸುರಿಯುವುದು: ಮೊಲೆತೊಟ್ಟುಗಳಿಂದ ಹಳದಿ ಅಥವಾ ಇತರ ಬಣ್ಣದ ಹಾಲು ಬರಲಾರಂಭಿಸಿದರೆ ಅದು ಕೂಡ ಸ್ತನ ಕ್ಯಾನ್ಸರ್‌ನ ಸೂಚನೆ ಇರಬಹುದು. ಹಾಗಾಗಿ ಅದನ್ನು ಲಘುವಾಗಿ ಪರಿಗಣಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.