ಧನಿಯಾ ಬೀಜ ನಿತ್ಯದ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದು. ಅದನ್ನು ಸೇವಿಸುವುದರಿಂದ ಯಾವೆಲ್ಲ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ…?
ಧನಿಯಾ ಅಥವಾ ಕೊತ್ತಂಬರಿ ಬೀಜ ಕೇವಲ ಅಡುಗೆಗೆ ಸೀಮಿತವಲ್ಲ. ಅದರಲ್ಲಿ ಹಲವು ಔಷಧೀಯ ಗುಣಗಳಿವೆ. ಧನಿಯಾ ಜೊತೆ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಶೀತದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಮೂಲವ್ಯಾಧಿ ಸಮಸ್ಯೆ ಇರುವವರು ಕೊತ್ತಂಬರಿ ಪುಡಿಯನ್ನು ಹಾಲಿಗೆ ಬೆರೆಸಿ ಬೆಲ್ಲ ಸೇರಿಸಿ ನಿತ್ಯ ಕುಡಿಯುವುದು ಬಹಳ ಒಳ್ಳೆಯದು. ಮೂಲವ್ಯಾಧಿ ಸಮಸ್ಯೆ ಹೆಚ್ಚಿರುವವರು ಇದನ್ನು ನಿತ್ಯ ಮಾಡಿ. ಮೂತ್ರ ಸರಿಯಾಗಿ ಆಗದಿದ್ದರೂ ನಾಲ್ಕು ಕಾಳುಗಳನ್ನು ಜಜ್ಜಿ ಅದನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಆ ನೀರನ್ನು ಕುಡಿದು ನೋಡಿ. ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.
ಜ್ವರ ಬಂದರೆ ಧನಿಯಾ ಪುಡಿಯೊಂದಿಗೆ ಶುಂಠಿ ಹಾಗೂ ಜೇನುತುಪ್ಪ ಸೇರಿಸಿ ಕುಡಿಯಿರಿ. ಬಾಯಿಯಲ್ಲಿ ಹುಣ್ಣಾದರೂ ಧನಿಯಾ ಪುಡಿಯ ಕಷಾಯ ಹೇಳಿ ಮಾಡಿಸಿದ ಮದ್ದು.
ಹಿಂದಿನ ರಾತ್ರಿ ಎರಡು ಚಮಚ ಕೊತ್ತಂಬರಿ ನೆನೆಸಿಟ್ಟು ಬೆಳಗೆದ್ದು ಅದರ ನೀರು ಕುಡಿಯುವುದರಿಂದ ಆಸಿಡಿಟಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಜೀರ್ಣ ಕ್ರಿಯೆಯೂ ಸುಲಭಗೊಳ್ಳುತ್ತದೆ. ದೇಹದ ವಿಷಕಾರಿ ಅಂಶಗಳೂ ಹೊರಹೋಗುತ್ತವೆ.