ಡಯಾಬಿಟೀಸ್ ಅಥವಾ ಸಕ್ಕರೆ ಕಾಯಿಲೆ ಇರುವವರು ಕೆಲವು ಹಣ್ಣನ್ನು ತಿನ್ನಬಾರದು. ಅದರಿಂದ ಬ್ಲಡ್ ಶುಗರ್ ಜಾಸ್ತಿಯಾಗುತ್ತದೆ. ಕೆಲ ಹಣ್ಣುಗಳು ಶುಗರ್ ಇರುವವರಿಗೆ ರಾಮಬಾಣ. ಕೆಲ ಹಣ್ಣುಗಳು ಶುಗರ್ ಲೆವಲ್ ಕಡಿಮೆ ಮಾಡುತ್ತವೆ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತವೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಹಾಗಾದರೆ ಡಯಾಬಿಟಿಸ್ ಇರುವವರಿಗೆ ಕೆಲ ಹಣ್ಣು ಅಪಾಯಕಾರಿಯೇ? ಯಾವ ಹಣ್ಣುಗಳನ್ನು ಸೇವಿಸಬೇಕು? ಯಾವ ಹಣ್ಣುಗಳಲ್ಲಿ ಯಾವ ಯಾವ ಅಂಶಗಳು ಇರುತ್ತವೆ ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ಸೂಕ್ತ ಮಾಹಿತಿ ನೀಡಿದ್ದಾರೆ.
ಹಣ್ಣುಗಳಲ್ಲಿ ಮುಖ್ಯವಾಗಿ ಕಾರ್ಬೊಹೈಡ್ರೇಟ್ ಅಥವಾ ಗ್ಲುಕೋಸ್, ವಿಟಮಿನ್, ಮಿನರಲ್ಸ್, ಆಂಟಿ ಒಕ್ಸಿಡೆಂಟ್ ಯಥೇಚ್ಚವಾಗಿ ಇರುತ್ತವೆ. ಹಣ್ಣುಗಳಲ್ಲಿ ಆರೋಗ್ಯಕಾರಿ ಅಂಶಗಳು ಇರುತ್ತವೆ. ಹಣ್ಣುಗಳಲ್ಲಿರುವ ಕಾರ್ಬೊಹೈಡ್ರೇಟ್ ಒಂದು ರೀತಿ ಮನುಷ್ಯನಿಗೆ ಸುರಕ್ಷಿತ ಹಾಗೂ ಆರೋಗ್ಯಕರವಾದದ್ದು. ಆದರೆ ಯಾವ ಸಂದರ್ಭಗಳಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದು ಮುಖ್ಯ. ಡಯಾಬಿಟೀಸ್ ಇರುವವರು ಯಾವೆಲ್ಲ ಹಣ್ಣುಗಳನ್ನು ಎಷ್ಟು ಸೇವಿಸಬಹುದು ಎಂಬುದರ ಬಗ್ಗೆ ಡಾ. ರಾಜು ಈ ವಿಡಿಯೋದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.