
ರೆಡಿಟ್ನಲ್ಲಿ ಗಣಿತ ಶಿಕ್ಷಕಿಯೊಬ್ಬರು ತನ್ನ ಗೊಂದಲವನ್ನು ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳು ನನ್ನನ್ನು goat ಎಂದು ಕರೆಯುತ್ತಾರೆ. ನನಗೆ ತಿಳಿದಂತೆ ಗೋಟ್ ಅಂದರೆ ಮೇಕೆ ಎಂದರ್ಥ. ಆದರೆ ಮಕ್ಕಳು ನನ್ನನ್ನೇಕೆ ಈ ರೀತಿ ಅಣಕಿಸುತ್ತಿದ್ದಾರೆ ಎಂದು ತನ್ನ ಗೊಂದಲವನ್ನು ಹೊರ ಹಾಕಿದ್ದಾರೆ.
ಇಡೀ ಶಾಲಾ ವರ್ಷದಲ್ಲಿ ವಿದ್ಯಾರ್ಥಿಗಳು ನನ್ನನ್ನು ಮೇಕೆ ಎಂದು ಕರೆಯುತ್ತಿದ್ದಾರೆ. ನಾನು ಪ್ರತಿ ಬಾರಿಯೂ ಮಕ್ಕಳು ಹಾಗೆ ಕರೆದಾಗ ನೀವೇ ಮೇಕೆಗಳು ಎನ್ನುತ್ತಿದ್ದೆ. ಮಕ್ಕಳೆಲ್ಲ ನನ್ನನ್ನು ನೋಡಿ ನಗುತ್ತಿದ್ದರು. ಇದು ತುಂಬಾನೇ ತಮಾಷೆಯಾಗಿದ್ದು. ಈ ಮಕ್ಕಳೆಲ್ಲ ನಿಜಕ್ಕೂ ಒಳ್ಳೆಯವರು. ಹೀಗಾಗಿ ಇವರೆಲ್ಲ ನನ್ನನ್ನು ಗೇಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಹಾಸ್ಯ ಏನಿರಬಹುದು ಎಂದು ಇಲ್ಲಿ ಯಾರಾದರೂ ವಿವರಿಸಬಹುದೇ ಎಂದು ರೆಡಿಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಗಣಿತ ಶಿಕ್ಷಕಿಯ ಈ ಗೊಂದಲಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಗೋಟ್ ಎಂದರೆ ಮೇಕೆಯಲ್ಲ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಅಂದರೆ ನೀವು ಎಲ್ಲರಿಗಿಂತ ಶ್ರೇಷ್ಠವಾದವರು ಎಂದರ್ಥ ಎಂದು ಹೇಳಿದ್ದಾರೆ. ಈ ವಿವರಣೆ ಕೇಳಿದ ಗಣಿತ ಶಿಕ್ಷಕಿ ಅಯ್ಯೋ ನನಗೆ ಅಳುವೇ ಬಂದಂತೆ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಮಕ್ಕಳು ನನ್ನನ್ನು ಹೊಗಳುತ್ತಿದ್ದರೇ..? ನನ್ನ ಪ್ರಶ್ನೆಗೆ ಉತ್ತರಿಸಿದ ನಿಮಗೆಲ್ಲ ಧನ್ಯವಾದ ಎಂದಿದ್ದಾರೆ.