ನಿಮಗೆ ಗೊತ್ತಾ….? ಸೌಂದರ್ಯ ಹೆಚ್ಚಿಸುತ್ತೆ ‘ವ್ಯಾಸಲೀನ್’ 31-10-2022 6:27PM IST / No Comments / Posted In: Beauty, Latest News, Live News, Life Style ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು ಉಗುರಿನ ಸೌಂದರ್ಯಕ್ಕೆ ವ್ಯಾಸಲೀನ್ ಬಳಸ್ತಾರೆ. ಇದರ ಬಳಕೆಯಿಂದ ಯಾವುದೇ ಹಾನಿ ಕೂಡ ಇಲ್ಲ. ತುಟಿ ಬಿರುಕು ಬಿಟ್ಟಲ್ಲಿ ಅಥವಾ ತುಟಿಯ ಹೊಳಪು ಹೆಚ್ಚಿಸಲು ಲಿಪ್ ಗ್ಲಾಸ್ ರೀತಿಯಲ್ಲಿ ವ್ಯಾಸಲೀನ್ ಬಳಸಬಹುದಾಗಿದೆ. ಕೈ ಹಾಗೂ ಕೈ ಬೆರಳುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಳ್ಳುವುದು ಒಳ್ಳೆಯದು. ಉಗುರುಗಳಿಗೆ ವ್ಯಾಸಲೀನ್ ನಿಂದ ಮಸಾಜ್ ಮಾಡಿಕೊಂಡರೆ ಉಗುರಿನ ಹೊಳಪು ಜಾಸ್ತಿಯಾಗುತ್ತದೆ. ನಿಮ್ಮ ಕಣ್ಣಿನ ರೆಪ್ಪೆ ಹಾಗೂ ಸುತ್ತಮುತ್ತಲಿನ ಭಾಗ ಒಣಗಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ. ಹಿಮ್ಮಡಿ ಪಾದ ಬಿರುಕು ಬಿಟ್ಟಿದ್ದರೆ ವ್ಯಾಸಲೀನ್ ಹಚ್ಚಿಕೊಳ್ಳಿ. ರಾತ್ರಿ ಸ್ವಚ್ಛವಾಗಿ ಹಿಮ್ಮಡಿಯನ್ನು ತೊಳೆದು ವ್ಯಾಸಲೀನ್ ಹಚ್ಚಿ, ಸಾಕ್ಸ್ ಹಾಕಿ ಮಲಗಬೇಕು. ಇದರಿಂದ ಹಿಮ್ಮಡಿ ಬಿರುಕು ಬಿಡುವುದಿಲ್ಲ. ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿದ್ದರೆ ವ್ಯಾಸಲೀನ್ ಬಳಸಿ. ಹೇರ್ ಕಂಡೀಶನರ್ ರೂಪದಲ್ಲಿ ಕೂಡ ವ್ಯಾಸಲೀನ್ ಉಪಯೋಗಿಸಬಹುದಾಗಿದೆ. ಇದ್ರಿಂದ ಹೊಟ್ಟು ನಿವಾರಣೆಯಾಗುತ್ತದೆ. ಕಿವಿಯೋಲೆ ರಂಧ್ರಗಳಿಗೆ ವ್ಯಾಸಲೀನ್ ಬಳಸಬಹುದು. ವ್ಯಾಸಲೀನ್ ಗೆ ಉಪ್ಪು ಬೆರೆಸಿ ಸ್ಕಿನ್ ಸ್ಕ್ರಬ್ಬಾಗಿ ಇದನ್ನು ಉಪಯೋಗಿಸಿ.