ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಯದೇ ಇನ್ನೊಂದು ರೂಪ. ಇದು ಫರ್ಮೆಂಟೆಡ್ ಬೆಳ್ಳುಳ್ಳಿ. ಅಂದರೆ ಹೆಪ್ಪು ಹಾಕಿದ ಬೆಳ್ಳುಳ್ಳಿ. ಹೀಗೆ ಫರ್ಮೆಂಟ್ ಮಾಡಿದ ಬೆಳ್ಳುಳ್ಳಿ ಮಾಮೂಲಿ ಬೆಳ್ಳುಳ್ಳಿಯಷ್ಟು ಪರಿಮಳ ಇಲ್ಲದಿದ್ದರೂ ಹೆಚ್ಚು ಪೌಷ್ಠಿಕಾಂಶದಿಂದ ಕೂಡಿದೆ, ಬೆಳ್ಳುಳ್ಳಿಯನ್ನು ಹೆಪ್ಪು ಹಾಕಿದ ನಂತರ ಅದರಲ್ಲಿ ಫ್ಯಾಟ್ ಮತ್ತು ಕಾರ್ಬೋಹೈಡ್ರೇಡ್ ಅಂಶ ಹೆಚ್ಚುತ್ತದೆ.
ಈ ಕಪ್ಪು ಬೆಳ್ಳುಳ್ಳಿ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಇದು ಶರೀರದಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಿ ಕೆಟ್ಟ ಬ್ಯಾಕ್ಟೀರಿಯಾವನ್ನು ಶರೀರದಿಂದ ಹೊರಹಾಕುತ್ತದೆ. ಕಪ್ಪು ಬೆಳ್ಳುಳ್ಳಿ ಉಸಿರಾಟ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಅಲರ್ಜಿ ವಿರೋಧಿ, ಮಧುಮೇಹ ವಿರೋಧಿ ಗುಣವೂ ಇದೆ.
ಕಪ್ಪು ಬೆಳ್ಳುಳ್ಳಿ ಮಾಡುವವರು, ಬೆಳ್ಳುಳ್ಳಿ ಸಿಪ್ಪೆ ಬಿಡಿಸಬೇಕು. ಒಂದು ಡಬ್ಬಕ್ಕೆ ಅದನ್ನು ಹಾಕಬೇಕು. ಅದರಲ್ಲಿ ನೀರು, ಉಪ್ಪು ಮತ್ತು ನಿಮಗಿಷ್ಟವಾಗುವ ಗಿಡಮೂಲಿಕೆಯನ್ನು ಸೇರಿಸಿ ಅದನ್ನು ತಂಪಾದ ಸ್ಥಳದಲ್ಲಿಡಿ. 3-6 ವಾರಗಳು ಅದನ್ನು ಹಾಗೇ ಇಟ್ಟು ನಂತರ ಬಳಸಬೇಕು. ಬೆಳ್ಳುಳ್ಳಿಯನ್ನು ವಿನೆಗರ್ ಜೊತೆ ಬೆರೆಸಿ ಕೂಡ ಫರ್ಮೆಂಟ್ ಮಾಡಬಹುದು.