alex Certify ನಿಮಗೆ ಅಲರ್ಜಿ ಸಮಸ್ಯೆ ಇದೆಯಾ ? ಕೋವಿಡ್‌ ಸೋಂಕು ತಗುಲುವ ಅಪಾಯ ಬಹಳ ಕಡಿಮೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಅಲರ್ಜಿ ಸಮಸ್ಯೆ ಇದೆಯಾ ? ಕೋವಿಡ್‌ ಸೋಂಕು ತಗುಲುವ ಅಪಾಯ ಬಹಳ ಕಡಿಮೆ….!

ದೇಶಾದ್ಯಂತ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಅದರ ಅಪಾಯ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಆದ್ದರಿಂದ ಈ ವೈರಸ್ ಯಾವ ರೋಗಗಳಿಂದ ಹೆಚ್ಚು ವೇಗವಾಗಿ ಬೆಳೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಮತ್ತು ವೈದ್ಯರು,  ಸ್ಥೂಲಕಾಯತೆ, ವೃದ್ಧಾಪ್ಯ ಮತ್ತು ಹಲವಾರು ಸಣ್ಣ ಕಾಯಿಲೆಗಳನ್ನು ಮುಖ್ಯ ಕಾರಣಗಳಾಗಿ ಉಲ್ಲೇಖಿಸಿ ಕೋವಿಡ್‌ನೊಂದಿಗೆ ತೀವ್ರ ಸಮಸ್ಯೆ ತಂದೊಡ್ಡುವ ಅಪಾಯಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವ ಜನರು ಕೋವಿಡ್‌ಗೆ ತುತ್ತಾಗಬಹುದು ಎನ್ನುತ್ತಾರೆ ವೈದ್ಯರು. ಅದನ್ನು ತಪ್ಪಿಸಲು ಏನು ಮಾಡಬೇಕು ಅನ್ನೋದು ಬಹಳ ಮುಖ್ಯ.

ಇತ್ತೀಚಿನ ಅಧ್ಯಯನದ ಪ್ರಕಾರ ಅಲರ್ಜಿಗಳು ತುಂಬಾ ಸಾಮಾನ್ಯವಾಗಿವೆ. ಪ್ರಪಂಚದಾದ್ಯಂತ ಕನಿಷ್ಠ 400 ಮಿಲಿಯನ್ ಜನರು ಅಲರ್ಜಿ ಮತ್ತು ಜ್ವರಗಳಿಂದ ಪ್ರಭಾವಿತರಾಗಿದ್ದಾರೆ. ಸುಮಾರು 300 ಮಿಲಿಯನ್ ಜನರು ಅಲರ್ಜಿಕ್ ಆಸ್ತಮಾದಿಂದ ಬಳಲುತ್ತಿದ್ದಾರೆ. ಸುಮಾರು 250 ಮಿಲಿಯನ್ ಜನರಿಗೆ ಆಹಾರಕ್ಕೆ ಸಂಬಂಧಪಟ್ಟ ಅಲರ್ಜಿಯಿದೆ. ಅನೇಕರಿಗೆ ಔಷಧಗಳ ಸೇವನೆಯಿಂದ್ಲೇ ಅಲರ್ಜಿಯಾಗುತ್ತದೆ. ಧೂಳು, ಸುಗಂಧ ದ್ರವ್ಯ ಅಥವಾ ಕೊಳೆತ ವಸ್ತುಗಳೆಂದರೆ ಕೆಲವರಿಗೆ ಅಲರ್ಜಿ ಇರುತ್ತದೆ.

ಅಲರ್ಜಿ ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಆದ್ರೆ ಅಟೊಪಿಕ್ ಕಾಯಿಲೆ ಇರುವವರಲ್ಲಿ ಕೋವಿಡ್‌ ಸೋಂಕು ಬರುವ ಸಾಧ್ಯತೆ ಶೇ.25ರಷ್ಟು ಕಡಿಮೆ ಇರುತ್ತದೆ. ಅಟೊಪಿಕ್ ಕಾಯಿಲೆ ಮತ್ತು ಆಸ್ತಮಾ ಹೊಂದಿರುವವರಿಗೂ ಕೊರೊನಾ ಅಪಾಯ ಶೇ.38ರಷ್ಟು ಕಡಿಮೆಯಾಗಿರುತ್ತದೆ. ಸಾಂಕ್ರಾಮಿಕ ರೋಗ ಆರಂಭವಾದ ಸಮಯದಲ್ಲಿ ಅಸ್ತಮಾ ಹೊಂದಿರುವವರಿಗೆ ಕೋವಿಡ್‌ ಅಪಾಯ ಹೆಚ್ಚು ಎಂದು ನಂಬಲಾಗಿತ್ತು. ಏಕೆಂದರೆ ಸೋಂಕು ಸಾಮಾನ್ಯವಾಗಿ ಅಸ್ತಮಾವನ್ನು ಉಲ್ಬಣಗೊಳಿಸುತ್ತದೆ.

ಆದರೆ ಸೌಮ್ಯವಾದ ಅಥವಾ ಚೆನ್ನಾಗಿ ನಿಯಂತ್ರಿತವಾಗಿರುವ ಅಸ್ತಮಾವು ಕೋವಿಡ್‌ನೊಂದಿಗೆ ತೀವ್ರವಾದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ಹೆಚ್ಚು ತೀವ್ರವಾದ ಆಸ್ತಮಾ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೂ ಪುರಾವೆಗಳಿಲ್ಲ. ನಿಮಗೆ ಕೆಲವೊಂದು ಆಹಾರ ಪದಾರ್ಥಗಳಿಂದ ಅಲರ್ಜಿಯಾಗುತ್ತಿದ್ದರೆ ಅದನ್ನು ಸೇವಿಸಬೇಡಿ. ಈ ರೀತಿ ಆಹಾರ ಅಲರ್ಜಿಯನ್ನು ಹೊಂದಿರುವವರಲ್ಲೂ ಕೊರೊನಾದ ಅಪಾಯ ಕಡಿಮೆ ಅನ್ನೋದು ಸಂಶೋಧನೆಯಲ್ಲಿ ಸಾಬೀತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...