alex Certify ನಿಮಗೆ ಇದೆಯಾ ಉಗುರು ಕಚ್ಚುವ ಅಭ್ಯಾಸ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಇದೆಯಾ ಉಗುರು ಕಚ್ಚುವ ಅಭ್ಯಾಸ…..?

ಕೆಲವರು ತಮ್ಮ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಕೇವಲ ಉಗುರುಗಳನ್ನು ಹಾನಿಗೊಳಿಸುವುದಲ್ಲದೆ ಹಲ್ಲುಗಳನ್ನೂ ಹಾನಿಮಾಡುತ್ತದೆ. ಈ ಅಭ್ಯಾಸವನ್ನು ತೊಡೆದು ಹಾಕಲು ಕೆಲವು ಸಲಹೆಗಳು ಇಲ್ಲಿವೆ.

* ಕಾಲಕಾಲಕ್ಕೆ ಉಗುರುಗಳನ್ನು ಕತ್ತರಿಸಿ. ಈ ರೀತಿ ಮಾಡುವುದರಿಂದ ಕೈಯಲ್ಲಿ ಯಾವುದೇ ಉಗುರು ಇರುವುದಿಲ್ಲ ಮತ್ತು ಉಗರು ಕಚ್ಚುವ ಅಭ್ಯಾಸ ಕಡಿಮೆಯಾಗುತ್ತದೆ.

* ಈ ಅಭ್ಯಾಸವನ್ನು ಬಿಡಲು ದೃಢವಾದ ನಿರ್ಧಾರವನ್ನು ಮಾಡಬೇಕು. ಅದಕ್ಕೆ ಸಹಾಯವಾಗುವಂತೆ ಮೊಬೈಲ್ ನಲ್ಲಿ ರಿಮೈಂಡರ್ ಗಳನ್ನೂ ಬಳಸಿ ನೆನಪಿಸಿಕೊಳ್ಳಿ ಮತ್ತು ನೀವು ಸಮಯ ಕಳೆಯುವ ಜಾಗದಲ್ಲಿ ಚೀಟಿಗಳಲ್ಲಿ ಬರೆದು ಅಂಟಿಸಿಕೊಳ್ಳಿ.

* ಸ್ತ್ರೀಯರು ಉಗುರುಗಳಿಗೆ ಸುಂದರವಾದ ಅಲಂಕಾರಗಳನ್ನು ಮಾಡಿಕೊಳ್ಳಿ. ಯಾಕೆಂದರೆ ಸುಂದರವಾಗಿ ಕಾಣುವ ಉಗುರುಗಳನ್ನು ಕಚ್ಚಲು ಮನಸ್ಸು ಬರುವುದಿಲ್ಲ.

* ಉಗುರು ಕಚ್ಚುವ ಅಭ್ಯಾಸ ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆಯ ಒಂದು ಕಾರಣವಾಗಿರುತ್ತದೆ. ಆದ್ದರಿಂದ ಹಾಲು ಉತ್ಪನ್ನಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಿ.

* ಉಗುರುಗಳನ್ನು ಕಚ್ಚಬೇಕು ಅಂತ ಅನಿಸಿದಾಗ ನಿಮ್ಮ ಗಮನವನ್ನು ಬೇರೆಡೆ ಕೇಂದ್ರಿಕರಿಸಿ.

* ಇದು ಯಾವುದು ಉಪಯೋಗ ವಾಗದಿದ್ದಲ್ಲಿ ರೋಗ ನಿರೋಧಕಗಳಾದ ಬೇವು ಅಥವಾ ಮೆಣಸಿನ ಪೇಸ್ಟ್ ಮಾಡಿ ಉಗುರುಗಳಿಗೆ ಹಚ್ಚುತ್ತಾ ಬನ್ನಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...