ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಹಾಲಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಹಾಲು ಎಲ್ಲರ ದೇಹ ಗುಣಕ್ಕೂ ಆಗಿಬರುವುದಿಲ್ಲ. ಅಂತಹವರು ಹಾಲನ್ನು ಕುಡಿಯದೇ ಇರುವುದು ಒಳ್ಳೆಯದು.
*ಕೆಲವರಿಗೆ ಹಾಲು ಸೇವಿಸಿದ ನಂತರ ವಾಕರಿಕೆ ಬಂದ ಹಾಗೇ ಆಗುವುದು, ಮೈ ಮೇಲೆ ಅಲರ್ಜಿ ಗುಳ್ಳೆಗಳು ಕಾಣಿಸಿಕೊಳ್ಳುವುದು ಕಂಡು ಬರುತ್ತದೆ. ಇಂತಹವರು ಹಾಲನ್ನು ಸೇವಿಸದೇ ಇರುವುದು ಒಳಿತು.
* ಹಾಲು ಎಣ್ಣೆ ಚರ್ಮದವರಿಗೆ ಕೂಡ ಆಗಿ ಬರುವುದಿಲ್ಲ. ಎಣ್ಣೆ ಚರ್ಮದವರು ಅತಿಯಾದ ಹಾಲಿನ ಸೇವನೆಯಿಂದ ಮೊಡವೆಯಂತಹ ಸಮಸ್ಯೆ ಎದುರಿಸಬೇಕಾಗುತ್ತದೆ.
*ಇನ್ನು ಕಫ, ಅಸಿಡಿಟಿ ಸಮಸ್ಯೆ ಇರುವವರಂತು ಹಾಲಿನಿಂದ ದೂರವಿದ್ದರೆ ಒಳ್ಳೆಯದು. ಹಾಲಿನ ಸೇವನೆಯಿಂದ ಕಫ ಇನ್ನಷ್ಟು ಜಾಸ್ತಿಯಾಗುವ ಸಂಭವವಿರುತ್ತದೆ.
*ಗಂಟಲಿನ ತೊಂದರೆ, ಉಸಿರಾಟದ ತೊಂದರೆ ಇರುವವರು ಕೂಡ ಹಾಲನ್ನು ತ್ಯಜಿಸುವುದು ಉತ್ತಮ.