ಉತ್ತಮ ಆರೋಗ್ಯಕ್ಕಾಗಿ, ತ್ವಚೆಯ ಹೊಳಪಿಗಾಗಿ, ದಿನವಿಡೀ ಲವಲವಿಕೆಯಿಂದ ಇರಲು ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡದಿದ್ದರೆ ಏನು ಸಮಸ್ಯೆಗಳಾಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.
ನಿದ್ದೆ ಕಡಿಮೆಯಾದಂತೆ ಹಸಿವು ಕಡಿಮೆಯಾಗಿ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇದರಿಂದ ದಿನವಿಡೀ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಯಾವುದೇ ಕೆಲಸ ಪೂರೈಸಲು ಆಸಕ್ತಿಯಾಗಲಿ, ಉಲ್ಲಾಸವಾಗಲಿ ಇರುವುದಿಲ್ಲ.
ನಿದ್ದೆ ಕಡಿಮೆ ತ್ವಚೆಯ ಮೇಲೂ ಪ್ರಭಾವ ಬೀರುತ್ತದೆ. ಕಣ್ಣಿನ ಕೆಳಗೆ ಕಪ್ಪು ವರ್ತುಲ ಕಾಣಿಸಿಕೊಳ್ಳುತ್ತದೆ. ಚರ್ಮ ಸುಕ್ಕಾಗುತ್ತದೆ.
ಈ ಕಿರಿಕಿರಿ ಮನೆಕೆಲಸ ಹಾಗೂ ಕಚೇರಿ ಕೆಲಸದ ಮೇಲೂ ಪ್ರಭಾವ ಬೀರಿ ತಪ್ಪುಗಳು ಹೆಚ್ಚಬಹುದು. ಇದನ್ನೆಲ್ಲಾ ತಪ್ಪಿಸಲು ಎಲ್ಲಾ ಚಿಂತೆಗಳನ್ನು ಪಕ್ಕಕ್ಕಿಟ್ಟು ಗಡದ್ದಾಗಿ ನಿದ್ದೆ ಹೊಡೆಯಿರಿ.