ನಿದ್ರೆಯಲ್ಲಿ ಮಾತನಾಡುವವರು, ನಡೆದಾಡುವವರ ಬಗ್ಗೆ ಕೇಳಿದ್ದೇವೆ. ನಿದ್ರೆಯಲ್ಲಿ ಶಾರೀರಿಕ ಸಂಬಂಧ ಬೆಳೆಸುವವರೂ ಇದ್ದಾರೆ. ನಿದ್ರೆಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದನ್ನು ಸ್ಲೀಪ್ ಸೆಕ್ಸ್ ಎಂದು ಕರೆಯುತ್ತೇವೆ. ಈ ರೋಗ ಬೇರೆ ಬೇರೆ ಜನರಿಗೆ ಬೇರೆ ಬೇರೆ ಪರಿಣಾಮ ಬೀರುತ್ತದೆ.
ಈ ರೋಗದಿಂದ ಬಳಲುವವರು ಕತ್ತಲಿನಲ್ಲಿ ಸಂಬಂಧ ಬೆಳೆಸಲು ಮುಂದಾಗ್ತಾರೆ. ಹಸ್ತಮೈಥುನ ಮಾಡಿಕೊಳ್ಳುವವರೂ ಇರ್ತಾರೆ. ನಿದ್ರೆಯಲ್ಲಿ ಸಂಗಾತಿ ಹುಡುಕಾಟ ನಡೆಸಿ, ಸಂಬಂಧ ಬೆಳೆಸ್ತಾರೆ. ಇದೊಂದು ಮಾರಣಾಂತಿಕ ಖಾಯಿಲೆ.
ಮೊದಲು ನಿದ್ರೆಯಲ್ಲಿ ಮಾತನಾಡುವವರು, ನಿದ್ರೆಯಲ್ಲಿ ನಡೆಯುವವರು ಈ ರೋಗದಿಂದ ಬಳಲುವುದು ಹೆಚ್ಚು. ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವವರು ಕೂಡ ಸ್ಲೀಪ್ ಸೆಕ್ಸ್ ಗೆ ಒಳಗಾಗುವ ಅಪಾಯವಿರುತ್ತದೆ.
ಮೊದಲು ಸಂಗಾತಿಗೆ ಅವ್ರ ಖಾಯಿಲೆ ಬಗ್ಗೆ ಹೇಳುವುದು ಒಳ್ಳೆಯದು. ಮಾತುಕತೆ ಮೂಲಕವೇ ಪರಿಹಾರ ಕಾರ್ಯ ಶುರುವಾಗುತ್ತದೆ. ಇದು ಅಪರಾಧವಲ್ಲ. ಭಯಪಡುವ ಅಗತ್ಯವಿಲ್ಲ. ಮುಚ್ಚಿಡಬೇಕಾಗಿಲ್ಲ. ಚಿಕಿತ್ಸೆ ಜೊತೆ ಸಂಗಾತಿಯಿಂದ ದೂರ ಮಲಗಬೇಕು. ಆಗ ಸಂಬಂಧ ಉಳಿಯಲು ಸಾಧ್ಯ.