alex Certify ನಿದ್ರಾಹೀನತೆ ಸಮಸ್ಯೆಯೇ….? ಅಮೆರಿಕ ಸೇನೆಯ ಸೂತ್ರ ಪಾಲಿಸಿದ್ರೆ ಎರಡೇ ನಿಮಿಷದಲ್ಲಿ ಬರುತ್ತೆ ನಿದ್ದೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ರಾಹೀನತೆ ಸಮಸ್ಯೆಯೇ….? ಅಮೆರಿಕ ಸೇನೆಯ ಸೂತ್ರ ಪಾಲಿಸಿದ್ರೆ ಎರಡೇ ನಿಮಿಷದಲ್ಲಿ ಬರುತ್ತೆ ನಿದ್ದೆ…!

ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. ಜಗತ್ತಿನಲ್ಲಿ ಲಕ್ಷಾಂತರ ಜನರು ನಿದ್ದೆಯಿಲ್ಲದೆ ಬಳಲುತ್ತಿದ್ದಾರೆ. ನಿಮಗೂ ಕೂಡ ಈ ಸಮಸ್ಯೆ ಇದ್ರೆ ಅದಕ್ಕೊಂದು ಪರಿಹಾರವಿದೆ. ಅಮೆರಿಕ ಸೈನ್ಯ ನಿದ್ರಾಹೀನತೆಯನ್ನು ಹೋಗಲಾಡಿಸಲು ವಿಶಿಷ್ಟ ಸೂತ್ರವೊಂದನ್ನು ಅಳವಡಿಸಿಕೊಂಡಿದೆ. ಇದನ್ನು ಪ್ರಯತ್ನಿಸಿದ್ರೆ ನೀವು ಕೂಡ ಕೇವಲ ಎರಡೇ ನಿಮಿಷಗಳಲ್ಲಿ ನಿದ್ರಾದೇವಿಯ ವಶವಾಗಬಹುದು.

ಅಮೆರಿಕದ ಮಿಲಿಟರಿಯು ಯುದ್ಧ ಅಥವಾ ವಿಶೇಷ ಸಂದರ್ಭಗಳಲ್ಲಿ ಮಲಗಲು ಈ ತಂತ್ರವನ್ನು ಬಳಸುತ್ತದೆ. ಮೊದಲು ನಿಮ್ಮ ಫೋನ್ ಅನ್ನು ಆಫ್ ಮಾಡಿಬಿಡಿ. ಹಾಸಿಗೆಯ ಅಂಚಿನಲ್ಲಿ ಕುಳಿತುಕೊಳ್ಳಿ. ಈ ಸಮಯದಲ್ಲಿ, ನಿಮ್ಮ ಹಾಸಿಗೆಯ ಮೇಲಿರುವ ಬೆಳಕು ಆನ್ ಆಗಿರಬೇಕು. ನಿಮ್ಮ ಮುಖದ ಸ್ನಾಯುಗಳನ್ನು ರಿಲ್ಯಾಕ್ಸ್‌ ಮಾಡಿ, ಅವುಗಳನ್ನು ಕುಗ್ಗಿಸಿ ಮತ್ತು ಬಿಗಿಗೊಳಿಸಿ. ನಂತರ ನಿಧಾನವಾಗಿ ಬಿಡುಗಡೆ ಮಾಡಿ.

ಈ ರೀತಿ ಮಾಡಿದಾಗ ನಿಮ್ಮ ಮುಖವು ನಿರ್ಜೀವವಾದ ಭಾವನೆಯನ್ನು ಹೊಂದುತ್ತದೆ. ನಂತರ ನಿಮ್ಮ ಭುಜಗಳನ್ನು ಕೆಳಕ್ಕಿಳಿಸಿ, ಕೈಗಳನ್ನೂ ಇಳಿಬಿಟ್ಟು ದೀರ್ಘವಾದ ಉಸಿರನ್ನು ಒಳಗೆಳೆದುಕೊಳ್ಳಿ, ಹೊರಹಾಕಿ. ಉಸಿರನ್ನು ಹೊರಕ್ಕೆ ಬಿಡುವಾಗ ಆ ಶಬ್ಧವನ್ನು ಆಲಿಸಲು ಪ್ರಯತ್ನಿಸಿ.  ನೀವು ಉಸಿರಾಡುವಾಗ, ಅದರ ಧ್ವನಿಯನ್ನು ಕೇಳಲು ಪ್ರಯತ್ನಿಸಿ. ಪ್ರತಿ ಉಸಿರಿನೊಂದಿಗೆ ನಿಮ್ಮ ಎದೆಯನ್ನು ರಿಲ್ಯಾಕ್ಸ್‌ ಮಾಡಿಕೊಳ್ಳಿ. ನಿಮ್ಮ ದೇಹವು ಸಡಿಲವಾದಾಗ, ಸ್ವಲ್ಪ ಸಮಯದವರೆಗೆ ನಿಮ್ಮ ಮನಸ್ಸನ್ನು ಶಾಂತಗೊಳಿಸಿ ಮತ್ತು ಯಾವುದರ ಬಗ್ಗೆಯೂ ಯೋಚಿಸಬೇಡಿ.

ನಿಮಗೆ ಕೆಲವು ಆಲೋಚನೆಗಳು ಬಂದರೆ, ಅವು ಬರಲಿ ಆದರೆ ನಿಮ್ಮ ಕಡೆಯಿಂದ ಏನನ್ನೂ ಯೋಚಿಸಬೇಡಿ. ಆ ಸಮಯದಲ್ಲಿ ನಿಮ್ಮ ಹೃದಯ ಮತ್ತು ಮನಸ್ಸು ಶಾಂತವಾಗುತ್ತದೆ. ಕಣ್ಣುಗಳನ್ನು ಮುಚ್ಚಿಕೊಂಡು ನೀಲಿ ಆಗಸದ ಅಡಿಯಲ್ಲಿ ಶಾಂತ ಸರೋವರದಲ್ಲಿರುವ ದೋಣಿಯಲ್ಲಿ ಮಲಗಿರುವಿರಿ ಎಂದು ಊಹಿಸಿಕೊಳ್ಳಿ. ಅಥವಾ ಭವ್ಯವಾದ ಕಣಿವೆಯಲ್ಲಿ ವೆಲ್ವೆಟ್ ಹಾಸಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದೀರಿ ಎಂದುಕೊಳ್ಳಿ.

ಸುಮಾರು ಒಂದು ನಿಮಿಷ ಈ ವಿಷಯಗಳ ಬಗ್ಗೆ ಯೋಚಿಸುತ್ತಿರಿ. ನಂತರ ಲೈಟ್‌ ಆಫ್‌ ಮಾಡಿ ಮಲಗಿ. ಈ ಪ್ರಕ್ರಿಯೆ ಕೇವಲ 2 ನಿಮಿಷ ತೆಗೆದುಕೊಳ್ಳುತ್ತದೆ, ಮಲಗಿದ ತಕ್ಷಣವೇ ನಿದ್ದೆ ನಿಮ್ಮನ್ನು ಆವರಿಸುತ್ತದೆ. ತಜ್ಞರ ಪ್ರಕಾರ ಈ ಸೂತ್ರವು ತಕ್ಷಣವೇ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕಾಗಿ ನಿಮಗೆ 4-5 ದಿನಗಳು ಬೇಕಾಗಬಹುದು. ಕ್ರಮೇಣ ನಿಮ್ಮ ದೇಹವು ಈ ಸೂತ್ರವನ್ನು ಸ್ವೀಕರಿಸುತ್ತದೆ. ಉತ್ತಮ ನಿದ್ರೆ ಮಾಡಿ ಎದ್ದರೆ ಮರುದಿನ ನೀವು ಸಂಪೂರ್ಣ ಉಲ್ಲಾಸದಿಂದಿರುತ್ತೀರಿ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...