alex Certify ನಿದ್ರಾಹೀನತೆಗೆ ಮೊಳಕೆ ಬರಿಸಿದ ಕಾಳುಗಳಲ್ಲಿದೆ ʼಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ರಾಹೀನತೆಗೆ ಮೊಳಕೆ ಬರಿಸಿದ ಕಾಳುಗಳಲ್ಲಿದೆ ʼಮದ್ದುʼ

ಕಚೇರಿಯ ಕೆಲಸದ ಒತ್ತಡ ಅಥವಾ ಇತರ ಕೌಟುಂಬಿಕ ಸಮಸ್ಯೆಗಳ ಪರಿಣಾಮ ನಿಮಗೆ ರಾತ್ರಿ ವೇಳೆ ಸರಿಯಾಗಿ ನಿದ್ದೆ ಬರದಿರಬಹುದು. ಇದರ ಅತ್ಯುತ್ತಮ ಪರಿಹಾರ ಎಂದರೆ ಮೊಳಕೆ ಕಟ್ಟಿದ ಕಾಳುಗಳು.

ಹುರುಳಿ ಕಾಳು ಮೊಳಕೆ ಬರಿಸಿ ಅದರ ನೀರನ್ನು ಕುಡಿಯುವುದರಿಂದ ಅಥವಾ ಮೊಳಕೆ ಕಟ್ಟಿದ ಹುರುಳಿಯ ಸಾರು ತಯಾರಿಸಿ ಕುಡಿಯುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಮಾಡಬಹುದು.

ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲು ಕುಡಿದು ಮಲಗುವುದರಿಂದಲೂ ಅತ್ಯುತ್ತಮ ನಿದ್ದೆ ಪಡೆಯಬಹುದು. ಇದರಲ್ಲಿರುವ ಕ್ಯಾಲ್ಸಿಯಂ ನಿದ್ದೆಗೆ ಪೂರಕವಾಗಿದೆ. ಸೌತೆಕಾಯಿಯ ತಿರುಳನ್ನು ಅಂಗಾಲಿಗೆ ತಿಕ್ಕಿ ಕಾಲು ತೊಳೆದು ಬಳಿಕ ಮಲಗುವುದರಿಂದಲೂ ಉತ್ತಮ ನಿದ್ದೆ ಪಡೆಯಬಹುದು.

ರಾತ್ರಿ ವೇಳೆ ಗಸೆಗಸೆ ಪಾಯಸ ತಯಾರಿಸಿ ಕುಡಿದರೆ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ. ನಿದ್ರಾಹೀನತೆ ಸಮಸ್ಯೆಯೂ ದೂರವಾಗುತ್ತದೆ.

ಸಬ್ಬಸ್ಸಿಗೆ ಸೊಪ್ಪಿನ ಪಲ್ಯ ಅಥವಾ ರೊಟ್ಟಿ ತಯಾರಿಸಿ ತಿನ್ನುವುದರಿಂದ ಅಥವಾ ಸಬ್ಬಸ್ಸಿಗೆ ಸೊಪ್ಪಿನ ಕಷಾಯ ಕುಡಿಯುವುದರಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು. ಅಲಸಂದೆ ಬೀಜದ ಜೊತೆ ಬೆಲ್ಲವನ್ನು ಜಗಿದು ತಿಂದರೆ ನಿದ್ರಾಹೀನತೆ ಸಮಸ್ಯೆ ದೂರವಾಗುವುದು ನಿಶ್ಚಿತ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...