ಆರೋಗ್ಯದ ದೃಷ್ಟಿಯಿಂದ ಇದು ಪುರುಷರು ಓದಲೇಬೇಕಾಗಿರುವ ಸುದ್ದಿ..! ಸಾಕಷ್ಟು ಅಧ್ಯಯನಗಳು ನೀಡಿರುವ ಫಲಿತಾಂಶದ ಪ್ರಕಾರ ಲೈಂಗಿಕ ಕ್ರಿಯೆ, ಹಸ್ತ ಮೈಥುನ, ಸ್ವಪ್ನ ಸ್ಖಲನ ಹೀಗೆ ಯಾವುದೇ ರೂಪದಲ್ಲಾದರೂ ವೀರ್ಯಗಳನ್ನು ದೇಹದಿಂದ ಹೊರಹಾಕುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ದೂರ ಇರಬಹುದಂತೆ..!
2016ರಲ್ಲಿ ನಡೆದ ಅಧ್ಯಯನವು ಈ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನೀಡಿದೆ. 1992 ರಿಂದ 2010ರ ಅವಧಿಯಲ್ಲಿ 32000 ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ 20ರ ಆಸುಪಾಸಿನಲ್ಲಿರುವ ಪುರುಷರು ತಿಂಗಳಿಗೆ ಕನಿಷ್ಟ 21 ಬಾರಿ ಸ್ಖಲನ ಮಾಡುವವರು ತಿಂಗಳಿಗೆ 7 ಅಥವಾ ಇದಕ್ಕಿಂತ ಕಡಿಮೆ ಸ್ಖಲನ ಮಾಡುವವರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದಿಂದ 19 ಪ್ರತಿಶತ ದೂರವಿರುತ್ತಾರೆ. 40ರ ಆಸುಪಾಸಿನಲ್ಲಿ ಇರುವವರು ಆಗಾಗ ಸ್ಖಲನ ಮಾಡಿದರೂ ಸಹ ಪ್ರಾಸ್ಟೇಟ್ ಕ್ಯಾನ್ಸರ್ನ ಅಪಾಯವು ಶೇಕಡಾ 22ರಷ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ನಿಯಮಿತ ಸ್ಖಲನ ಹಾಗೂ ಪ್ರೌಢಾವಸ್ಥೆಯಲ್ಲಿ ಸುರಕ್ಷಿತವಾದ ಲೈಂಗಿಕ ಸಂಭೋಗವು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕಿ ಜೆನ್ನಿಫರ್ ರೈಡರ್ ಹೇಳಿದ್ರು.
ಆಸ್ಟ್ರೇಲಿಯಾದಲ್ಲಿ 2338 ಮಂದಿ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ವಾರದಲ್ಲಿ ಸರಾಸರಿ 4-6 ಬಾರಿ ಸ್ಖಲನ ಮಾಡಿಕೊಳ್ಳುವವರು 70 ವರ್ಷಕ್ಕಿಂತಲು ಮುಂಚೆ ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುವ ಅಪಾಯವು 36 ಪ್ರತಿಶತ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ.
ಪ್ರಾಸ್ಟೇಟ್ ಗ್ರಂಥಿ ಎನ್ನುವುದು ಒಂದು ಸೂಕ್ಷ್ಮ ಅಂಗವಾಗಿದ್ದು, ಇದು ಪುರುಷರ ಜನನಾಂಗದ ಹಿಂಭಾಗದಲ್ಲಿ ಇರುತ್ತದೆ. ಇದು ಪುರುಷರಲ್ಲಿ ವೀರ್ಯದ ಜೊತೆಯಲ್ಲಿ ಪ್ರಾಸ್ಟೇಟ್ ದ್ರವವನ್ನು ಸ್ರವಿಸುವ ಕಾರ್ಯ ಮಾಡುತ್ತದೆ. ಇದು ಕಾಲ ಕಾಲಕ್ಕೆ ಸ್ರವಿಕೆ ಆಗದೇ ಹೋದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.