alex Certify ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ.

* ಮೊಸರಿನ ಪೋಷಕಾಂಶಗಳನ್ನು ಜೀರ್ಣಾಂಗಗಳು ಸುಲಭವಾಗಿ ಸ್ವೀಕರಿಸುತ್ತವೆ. ಇದರಲ್ಲಿ ಮಸಾಲ ಪದಾರ್ಥಗಳನ್ನು ಕಲಸಿ ತಿಂದರೆ ಅದರ ಘಾಟು ತಗ್ಗಿ ಹಾಯಾಗಿರುತ್ತದೆ.

* ಪ್ರತೀ ದಿನ ಮೊಸರು ತಿಂದರೆ ಎದೆ ಆರೋಗ್ಯ ಗಟ್ಟಿಯಾಗಿರುತ್ತದೆ. ಅಧಿಕ ರಕ್ತದೊತ್ತಡ ತಗ್ಗುತ್ತದೆ. ಕೊಲೆಸ್ಟ್ರಾಲ್ ಕೂಡ ಹತೋಟಿಗೆ ಬರುತ್ತದೆ.

* ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕ್ರಿಮಿಗಳನ್ನು ನಾಶಗೊಳಿಸುತ್ತದೆ. ಜನನೇಂದ್ರಿಯ ಇನ್ಫೆಕ್ಷನ್ ನಿಂದ ಕಾಪಾಡುತ್ತದೆ.

* ಮಹಿಳೆಯರನ್ನು ಕಾಡುವ ಆಸ್ಟಿಯೋಪೋರೋಸಿಸ್ ಕಡಿಮೆ ಮಾಡಿಕೊಳ್ಳಲು ನಿತ್ಯ ಮೊಸರು ತಿನ್ನುವುದು ಒಳಿತು. ಇದು ಎಲುಬಿಗೆ ಒಳಿತು ಮಾಡಿ ಆಸ್ಟಿಯೋಪೋರೋಸಿಸ್ ಸಮಸ್ಯೆ ತಗ್ಗಿಸುತ್ತದೆ. ಹಲ್ಲು ಕೂಡ ಆರೋಗ್ಯದಿಂದ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್ ಪೋಷಕಾಂಶಗಳು ಹೆಚ್ಚು ಇರುವುದೇ ಇದಕ್ಕೆ ಕಾರಣ.

* ಮೊಸರಿನಲ್ಲಿ ಜಿಂಕ್, ವಿಟಮಿನ್ ಇ ನಂತಹ ಪೋಷಕಾಂಶಗಳು ಅಧಿಕವಾಗಿವೆ. ನಿತ್ಯ ಮೊಸರು ಸೇವಿಸುವುದರಿಂದ ಚರ್ಮವು ತಾಜಾತನದಿಂದ ಹೊಳೆಯುತ್ತದೆ. ತೂಕವನ್ನು ಸಮಸ್ಥಿತಿಯಲ್ಲಿಡಲು ಇದು ಸಹಾಯಕ.

* ಮೊಸರು ತಿಂದರೆ ಕೊಬ್ಬಿನಂಶ ಹೆಚ್ಚುತ್ತದೆ ಎಂದು ಭಯಪಡುವವರು, ಬೆಣ್ಣೆ ನೀಗಿದ ಹಾಲಿನ ಮೊಸರು ತಿನ್ನಬಹುದು. ಕ್ಯಾಲೋರಿಗಳ ಭಯವಿಲ್ಲದೆ ಪೋಷಕಾಂಶಗಳನ್ನು ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...