ವಾಸ್ತು ಶಾಸ್ತ್ರದ ಪ್ರಕಾರ, ಸಕಾರಾತ್ಮಕ ಶಕ್ತಿ ಮನೆಯಲ್ಲಿದ್ದರೆ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ. ಮನೆಯ ಸದಸ್ಯರು ಆರೋಗ್ಯಕರ, ಆನಂದದ ಜೀವನ ನಡೆಸುತ್ತಾರೆ. ಮನೆಯಲ್ಲಿ ವಾಸ್ತು ದೋಷವಾಗದಂತೆ ನೋಡಿಕೊಳ್ಳಬೇಕು. ಕೆಲ ಸಣ್ಣ ಸಣ್ಣ ಉಪಾಯಗಳ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಬಹುದು.
ವಾಸ್ತು ಪ್ರಕಾರ, ಹಣವಿಡುವ ಕಪಾಟಿನ ಬಾಗಿಲು ಉತ್ತರ ದಿಕ್ಕಿಗೆ ತೆಗೆಯುವಂತಿರಬೇಕು. ಹಾಗೆ ಹಣ, ಆಭರಣವಿರುವ ಕಪಾಟಿನ ಬಳಿ ಪೊರಕೆ ಇಡಬಾರದು. ಕೊಳಕು ಇರದಂತೆ ನೋಡಿಕೊಳ್ಳಬೇಕು.
ಸದಾ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರಬೇಕೆಂದರೆ ವಾರಕ್ಕೆ ಒಮ್ಮೆ ಮನೆಯ ಎಲ್ಲ ಭಾಗಗಳಿಗೆ ಉಪ್ಪಿನ ನೀರು ಸಿಂಪಡಿಸಿ ಮನೆ ಸ್ವಚ್ಛಗೊಳಿಸಬೇಕು. ನೆನಪಿರಲಿ ಗುರುವಾರ ಉಪ್ಪಿನ ನೀರನ್ನು ಹಾಕಿ ಮನೆಯನ್ನು ಸ್ವಚ್ಛಗೊಳಿಸಬಾರದು.
ಒಂದು ಗ್ಲಾಸ್ ಗೆ ಉಪ್ಪನ್ನು ಹಾಕಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡುವುದ್ರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.
ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು. ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ದೇವರ ಮನೆ ಇರುವುದು ಕೂಡ ಒಳ್ಳೆಯದಲ್ಲ. ಇದ್ರಿಂದ ಮನೆಯಲ್ಲಿ ಸದಾ ಜಗಳ-ಗಲಾಟೆ ನಡೆಯುತ್ತದೆ.
ಬಾತ್ ರೂಮ್ ಬಳಸಿದ ನಂತ್ರ ಬಾಗಿಲನ್ನು ಅವಶ್ಯಕವಾಗಿ ಹಾಕಬೇಕು. ಬಾಗಿಲು ತೆರೆದಿಟ್ಟು ಬರಬಾರದು.
ಅಡುಗೆ ಮನೆ ಹಾಗೂ ಬಾತ್ ರೂಮಿನ ನಲ್ಲಿಯಲ್ಲಿ ನೀರಿನ ಹನಿ ಸದಾ ಬೀಳುತ್ತಿದ್ದರೆ ಅದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಗಲಾಟೆಗೆ ಕಾರಣವಾಗುತ್ತದೆ.
ಮನೆಯಲ್ಲಿ ಹಾಳಾದ ಗ್ಲಾಸ್ ಇರದಂತೆ ನೋಡಿಕೊಳ್ಳಿ. ಇದು ನಕಾರಾತ್ಮಕ ಶಕ್ತಿ ಹೆಚ್ಚಾಗಲು ಕಾರಣವಾಗುತ್ತದೆ.
ಮನೆಯೊಳಗೆ ಎಂದೂ ಮುಳ್ಳಿನ ಗಿಡವನ್ನು ಬೆಳೆಸಬಾರದು.