ರಷ್ಯಾ-ಉಕ್ರೇನ್ ನಡುವಣ ಸಮರದಿಂದಾಗಿ ಮೂರನೇ ಮಹಾಯುದ್ಧ ಆರಂಭವಾಗುವ ಸಾಧ್ಯತೆ ಇದೆಯೇ ? ಮಾಜಿ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಯ ಪ್ರಕಾರ, ಮುಂದಿನ ವರ್ಷ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗಲಿದೆ.
ಫ್ರಾನ್ಸ್ ಜ್ಯೋತಿಷಿ ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ ಜನಿಸಿದ್ದರು. ಆ ಸಮಯದಲ್ಲೇ ಭವಿಷ್ಯದ ಅನೇಕ ಜಾಗತಿಕ ಘಟನಾವಳಿಗಳ ಬಗ್ಗೆ ಹೇಳಿದ್ದರು. ಈ ಭವಿಷ್ಯವಾಣಿಗಳಲ್ಲೊಂದು ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ. ಆಗ ನುಡಿದಿದ್ದ ಭವಿಷ್ಯ ಈಗ ನಿಜವೆಂದು ಸಾಬೀತಾಗಿದೆ.
ರಷ್ಯಾ-ಉಕ್ರೇನ್ ನಡುವಣ ಯುದ್ಧವೇನೋ ಕೊನೆಗೊಳ್ಳುತ್ತದೆ, ಆದರೆ ಬೇರೆ ಬೇರೆ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳು ತಾರಕಕ್ಕೇರಿದ್ದು, ಮುಂದಿನ ವರ್ಷ ಪೂರ್ವ ಯುರೋಪಿನಲ್ಲಿ ದೊಡ್ಡ ಯುದ್ಧವೇ ಪ್ರಾರಂಭವಾಗಲಿದೆಯಂತೆ. ಇದು ಮೂರನೇ ಮಹಾಯುದ್ಧವಾಗಲಿದೆ. ಈ ಮಹಾಯುದ್ಧ ಸುಮಾರು 7 ತಿಂಗಳುಗಳವರೆಗೆ ಇರುತ್ತದೆ ಮತ್ತು ಈ ಸಮಯದಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೊಲ್ಲಲ್ಪಡುತ್ತಾರೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದರು.
ನಾಸ್ಟ್ರಾಡಾಮಸ್ ಪ್ರಕಾರ ಆ ಯುದ್ಧದಲ್ಲಿ ಅನೇಕ ದೇಶಗಳ ಅಸ್ತಿತ್ವವು ಕೊನೆಗೊಳ್ಳುತ್ತದೆ. ಬದುಕುಳಿದವರು ಜಗತ್ತಿನಲ್ಲಿ ಮಾನವ ಜೀವನವನ್ನು ಹೊಸದಾಗಿ ಪ್ರಾರಂಭಿಸುತ್ತಾರೆ. ಇದು ಜಗತ್ತಿನಲ್ಲಿ ಹೊಸ ವಿಶ್ವ ಕ್ರಮವನ್ನು ಪ್ರಾರಂಭಿಸುತ್ತದೆ ಎಂದು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದರು. 2022ರಲ್ಲಿ ಯುರೋಪ್ ನಲ್ಲಿ ಯುದ್ಧ ಆರಂಭವಾಗಲಿದೆ ಎಂಬುದನ್ನು ಅವರು ಊಹಿಸಿದ್ದರು. ಕ್ರಮೇಣ ಈ ಸಮರವೇ ಪ್ರಗತಿ ಹೊಂದಿ 3ನೇ ಮಹಾಯುದ್ಧದ ರೂಪ ಪಡೆಯುತ್ತದೆ ಎಂದು ನಂಬಲಾಗಿದೆ.
450 ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್ ನಿಧನ ಹೊಂದಿದ್ದಾರೆ. ಅಷ್ಟರಲ್ಲಾಗಲೇ ಅವರು 6,338 ಭವಿಷ್ಯವಾಣಿಗಳನ್ನು ನುಡಿದಿದ್ದರು. ಈ ಪೈಕಿ ಶೇ.70ರಷ್ಟು ಭವಿಷ್ಯವಾಣಿಗಳು ಈಗಾಗ್ಲೇ ನಿಜವಾಗಿವೆ. ಅಡಾಲ್ಫ್ ಹಿಟ್ಲರ್‌ನ ಉದಯ, ಎರಡನೆಯ ಮಹಾಯುದ್ಧ, ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿ, ಫ್ರೆಂಚ್ ಕ್ರಾಂತಿ ಮತ್ತು ಪರಮಾಣು ಬಾಂಬ್‌ನ ಅಭಿವೃದ್ಧಿ ಇವೆಲ್ಲವನ್ನೂ ಅವರು ಮೊದಲೇ ಭವಿಷ್ಯ ನುಡಿದಿದ್ದರು. 2020ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಆಗಮನವನ್ನು ಸಹ ನಾಸ್ಟ್ರಾಡಾಮಸ್ ಊಹಿಸಿದ್ದರು, ಅದು ನಿಜವೆಂದು ಸಾಬೀತಾಯಿತು. ಹಾಗಾಗಿ 3ನೇ ಮಹಾಯುದ್ಧದ ಭವಿಷ್ಯವಾಣಿ ಕೂಡ ಸತ್ಯವಾಗಬಹುದೆಂದು ನಂಬಲಾಗಿದೆ.