ಚುನಾವಣಾ ಆಯೋಗವು ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮತ್ತು ಪಂಜಾಬ್ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಬಹುದು ಎಂಬ ಊಹಾಪೋಹಗಳು ಹರಡುತ್ತಿವೆ.
ಗುರುವಾರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗ್ಲೇ ಈ ಐದು ರಾಜ್ಯಗಳ ವಿಧಾನಸಭಾ ಅಧಿಕಾರಾವಧಿ ಮುಗಿಯಲು ಬಂದಿದೆ. ಚುನಾವಣಾ ಸಮಿತಿಯು ಇದೇ ವೇಳಾಪಟ್ಟಿಯನ್ನು ಅನುಸರಿಸಿ, ರಾಜ್ಯ ವಿಧಾನಸಭೆಗಳ ಅಧಿಕಾರಾವಧಿ ಮುಗಿಯುವ ಮೊದಲು ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಹಾಗಾಗಿ ಇಂದು ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಪಂಚರಾಜ್ಯಗಳ ಚುನಾವಣಾ ದಿನಾಂಕ ನಿಗದಿಯಾಗಬಹುದು ಎಂದು ಹೇಳಲಾಗ್ತಿದೆ.
ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸ ನಡೆಸಿರುವ ಚುನಾವಣಾ ಆಯೋಗದ ನಿಯೋಗವು, ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು, ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳನ್ನು ನಿನ್ನೆ ಭೇಟಿ ಮಾಡಿದೆ. ಭೇಟಿಯಾದ ಒಂದು ದಿನದ ನಂತರ ಎಲೆಕ್ಷನ್ ಕಮಿಷನ್ ಈ ಪತ್ರಿಕಾಗೋಷ್ಠಿ ನಡೆಸುತ್ತಿರುವುದರಿಂದ ಇದನ್ನ ನಿರ್ಣಾಯಕ ಪ್ರೆಸ್ ಕಾನ್ಫರೆನ್ಸ್ ಎಂದು ಅಂದಾಜಿಸಲಾಗಿದೆ.
ʼಒಮಿಕ್ರಾನ್ʼ ಕುರಿತು ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಶ್ವಸಂಸ್ಥೆ ಮುಖ್ಯಸ್ಥ
ಇಸಿ ನಿಯೋಗ ನಿನ್ನೆ ದಿನವಿಡೀ ಯುಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. “ನಿಯೋಗವು ಜಿಲ್ಲಾಧಿಕಾರಿಗಳು, ಪೊಲೀಸ್ ಮುಖ್ಯಸ್ಥರು, ಆಯುಕ್ತರು, ಐಜಿಗಳು, ಡಿಐಜಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿದೆʼʼ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಆಯೋಗವು ತನ್ನ ಚುನಾವಣಾ ಪೂರ್ವ ಭಾಗವಾಗಿ ಈಗಾಗಲೇ ಚುನಾವಣೆಗೆ ಒಳಪಡುವ ಇತರ ರಾಜ್ಯಗಳಾದ ಪಂಜಾಬ್, ಗೋವಾ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡಿದೆ.