alex Certify ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ಗೊತ್ತಾ ? ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಂಬೆ ಹಣ್ಣಿನ ದೀಪ ಹಚ್ಚುವ ಸರಿಯಾದ ಸ್ಥಳ ಯಾವುದು ಗೊತ್ತಾ ? ನಿಮಗೆ ತಿಳಿದಿರಲಿ ಈ ಮಾಹಿತಿ

ದೇವರಿಗೆ ಹಚ್ಚುವ ದೀಪಗಳಲ್ಲಿ ಅನೇಕ ಬಗೆ ಇದೆ. ತುಪ್ಪದ ದೀಪ, ಬೆಲ್ಲದ ಆರತಿ, ತಂಬಿಟ್ಟಿನ ಆರತಿ ಹೀಗೆ. ಇವುಗಳಲ್ಲಿ ಮತ್ತೊಂದು ಮುಖ್ಯವಾದ ದೀಪ ಎಂದರೆ ನಿಂಬೆ ಹಣ್ಣಿನ ದೀಪ. ಹೆಣ್ಣು ಮಕ್ಕಳು ಇದನ್ನು ಹೆಚ್ಚಾಗಿ ತಮ್ಮ ಕೋರಿಕೆ ಅಥವಾ ಇಷ್ಟಾರ್ಥಗಳನ್ನು ಈಡೇರಿಕೆಗೆ ಹರಕೆಯ ರೂಪದಲ್ಲಿ ದೇವಾಲಯಗಳಲ್ಲಿ ಹಚ್ಚುವುದನ್ನು ನೋಡಿರಬಹುದು.

ನಿಂಬೆ ಹಣ್ಣಿನ ದೀಪ ಹಚ್ಚುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಲೆ ಬೇಕು. ಈ ದೀಪಗಳನ್ನು ರಾಹುಕಾಲದಲ್ಲಿ ಹಚ್ಚಿದರೆ ಹೆಚ್ಚು ಶ್ರೇಷ್ಠ. ಶಕ್ತಿ ದೇವತೆಗಳ ದೇವಾಲಯಗಳಲ್ಲಿ ಮಾತ್ರ ನಿಂಬೆ ಹಣ್ಣಿನ ದೀಪ ಹಚ್ಚಬೇಕು. ದೀಪ ಹಚ್ಚಲು ಆಯ್ಕೆ ಮಾಡಿಕೊಳ್ಳುವ ನಿಂಬೆ ಹಣ್ಣು ಚೆನ್ನಾಗಿರಬೇಕು. ಕೊಳೆತ ಅಥವಾ ಒಣಗಿದ ನಿಂಬೆ ಹಣ್ಣು ಹಚ್ಚಬಾರದು. ಎಲ್ಲಕಿಂತ ಹೆಚ್ಚಾಗಿ ನಿಂಬೆ ಹಣ್ಣಿನ ದೀಪವನ್ನು ಮನೆಯಲ್ಲಿ ಹಚ್ಚಲೇಬಾರದು.

ಭಕ್ತರು ತಮ್ಮ ಶಕ್ತಿ ಹಾಗೂ ಸಂಕಲ್ಪದ ಅನುಸಾರ ಎರಡು, ಐದು, ಒಂಬತ್ತು ದೀಪಗಳನ್ನು ಹಚ್ಚಬಹುದು. ಮಂಗಳವಾರ, ಶುಕ್ರವಾರ, ಭಾನುವಾರದ ರಾಹುಕಾಲದ ಸಮಯದಲ್ಲಿ ಇದನ್ನು ಹಚ್ಚುವುದು ಶ್ರೇಷ್ಠ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...