ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದರಿಂದ ಹಲವು ಕಾಯಿಲೆಗಳನ್ನು ಗುಣಪಡಿಸಬಹುದು.
ಅಲ್ಲದೇ ಈ ನಿಂಬೆ ಹಣ್ಣಿನಿಂದ ಕೂದಲಿನ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು. ನಿಂಬೆ ಹಣ್ಣಿಗೆ ಇನ್ನಿತರ ವಸ್ತುಗಳನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು.
*ನಿಂಬೆ ಹಣ್ಣು ಮತ್ತು ತೆಂಗಿನೆಣ್ಣೆಯಲ್ಲಿ ಆ್ಯಂಟಿ ಫಂಗಲ್ ಗುಣವಿದೆ ಇವೆರೆಡನ್ನು ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ ಮಸಾಜ್ ಮಾಡಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದರಿಂದ ನೆತ್ತಿ ತೇವಾಂಶದಿಂದ ಕೂಡಿದ್ದು ತಲೆಹೊಟ್ಟು ನಿವಾರಣೆಯಾಗುತ್ತದೆ.
*ನಿಂಬೆ ಹಣ್ಣು, ಮೊಸರು, ಆಲಿವ್ ಆಯಿಲ್, ಮತ್ತು ಜೇನುತುಪ್ಪ ಇವು ನೆತ್ತಿಯನ್ನು ತೇವಾಂಶಗೊಳಿಸಿ ಶಿಲೀಂಧ್ರ ಸೋಂಕಿನ ವಿರುದ್ಧ ಹೋರಾಡುತ್ತವೆ. ಹಾಗಾಗಿ ½ ಕಪ್ ಮೊಸರಿಗೆ 1 ಚಮಚ ನಿಂಬೆ ರಸ, ಜೇನುತುಪ್ಪ, ಆಲಿವ್ ಆಯಿಲ್ ಸೇರಿಸಿ ನೆತ್ತಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ.