alex Certify ‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ ಗುಣಗಳು ಇವೆ.

ನಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಮೊಡವೆ ಕಡಿಮೆಯಾಗುತ್ತದೆ. ಒಂದು ಚಮಚ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಗೆ ಒಂದು ಚಮಚ ಸಕ್ಕರೆ, ಜೇನು ತುಪ್ಪ, ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖ ತೊಳೆದು ಮುಖದ ಮೇಲೆ ಹಚ್ಚಿ. ಇದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ.

ಒಂದು ಚಮಚದಷ್ಟು ನಿಂಬೆ ಸಿಪ್ಪೆಯ ಪುಡಿಗೆ ಒಂದು ಚಮಚ ಸ್ಯಾಂಡಲ್ ಪೌಡರ್ ಹಾಕಿ ಎರಡು ಚಮಚ ರೋಸ್ ವಾಟರ್, ಎರಡು ಚಮಚ ಹಾಲು ಹಾಕಿ ಮಿಶ್ರಣ ಮಾಡಿ ಇದನ್ನು ಮುಖ ಕುತ್ತಿಗೆಗೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ಚರ್ಮ ಅಥವಾ ಮುಖ ಸೂರ್ಯನ ಕಿರಣಗಳಿಂದ ಕಪ್ಪಗೆ ಆಗಿದ್ದರೆ ಅದನ್ನು ಸರಿ ಮಾಡುತ್ತದೆ.

ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಬ್ರಶ್ ಗೆ ಹಾಕಿ ಉಜ್ಜಬೇಕು. ಇದರಿಂದ ಹಲ್ಲು ಹೊಳೆಯುತ್ತದೆ. ಇದನ್ನು ವಾರದಲ್ಲಿ ಎರಡು ಸಲ ಮಾಡಿ ಒಳ್ಳೆಯ ಫಲಿತಾಂಶ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...