ನಿಂಬೆಹಣ್ಣಿನಿಂದ ಸೌಂದರ್ಯ ಹೆಚ್ಚಿಸಬಹುದು, ಆರೋಗ್ಯ ಕಾಪಾಡಬಹುದು, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಮಾತ್ರವಲ್ಲ ಕೂದಲನ್ನು ನೀಳವಾಗಿ ಬೆಳೆಸಿಕೊಳ್ಳಬಹುದು. ಹೇಗೆನ್ನುತ್ತೀರಾ?
ನಿಂಬೆಹಣ್ಣಿನ ರಸವನ್ನು ರಾತ್ರಿ ವೇಳೆ ನೆತ್ತಿಗೆ ಹಚ್ಚಿ ಬೆಳಿಗ್ಗೆ ಎದ್ದಾಕ್ಷಣ ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ವಾರಕ್ಕೆ ಒಂದರಿಂದ ಎರಡು ಬಾರಿ ಹೀಗೆ ಮಾಡಿ ನೋಡಿ. ಕೆಲವೇ ದಿನಗಳಲ್ಲಿ ತಲೆಹೊಟ್ಟು ಸಮಸ್ಯೆಯೂ ದೂರವಾಗುತ್ತದೆ.
ತೆಂಗಿನಕಾಯಿಯ ನೀರಿಗೆ ನಿಂಬೆರಸ ಹಿಂಡಿ ಅದರಲ್ಲಿ ತಲೆಕೂದಲನ್ನು ತೊಳೆಯುವುದರಿಂದ ಕೂದಲು ದಪ್ಪಗೆ ಬೆಳೆಯುತ್ತದೆ. ತಲೆ ತುರಿಕೆಯಂಥ ಸಮಸ್ಯೆಗಳು ದೂರವಾಗುತ್ತವೆ. ಕೂದಲು ಹೊಳಪು ಪಡೆದುಕೊಳ್ಳುತ್ತದೆ.
ನಿಮ್ಮದು ಸಿಲ್ಕ್ ಮತ್ತು ಒಣ ಕೂದಲಾಗಿದ್ದರೆ ಅದಕ್ಕೆ ಮೊಸರು ಹಾಗೂ ಲಿಂಬೆಹಣ್ಣಿನ ಪೇಸ್ಟ್ ತಯಾರಿಸಿ, ವಾರಕ್ಕೆರಡು ಬಾರಿ ಹಚ್ಚಿ. ಇದರಿಂದಲೂ ತಲೆಹೊಟ್ಟು ದೂರವಾಗಿ, ಕೂದಲು ಉದುರುವುದು ನಿಲ್ಲುತ್ತದೆ. ಕೂದಲು ವೇಗವಾಗಿ ಬೆಳೆಯುತ್ತದೆ.
ನಿಂಬೆಹಣ್ಣಿನ ರಸಕ್ಕೆ ಆಲಿವ್ ಆಯಿಲ್ ಸೇರಿಸಿ ನೆತ್ತಿಗೆ ಮಸಾಜ್ ಮಾಡಿದರೂ ಕೂದಲು ಮೃದುವಾಗುತ್ತದೆ. ಇದರಿಂದ ಕೂದಲು ದೃಢವಾಗುತ್ತದೆ.