ಪ್ರತಿಯೊಬ್ಬರಿಗೂ ಜೀವಜಲದ ಮಹತ್ವ ಗೊತ್ತಿರುತ್ತದೆ. ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಕುಡಿಯಬೇಕು ಎನ್ನುವುದು ಮುಖ್ಯವಾಗುತ್ತದೆ.
ನೀರು ಕುಡಿಯಲು ವಿಧಾನವಿದೆಯೇ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ. ಕೇವಲ ದಣಿವನ್ನು ನಿವಾರಿಸಲು ಮಾತ್ರವಲ್ಲದೇ, ದೇಹಕ್ಕೆ ಲವಣಾಂಶ ನೀಡುವುದಕ್ಕೂ ನೀರು ಸಹಾಯ ಮಾಡುತ್ತದೆ. ಆದ್ದರಿಂದ ನೀರನ್ನು ನಿಂತುಕೊಂಡು ಅಥವಾ ಅವಸರದಲ್ಲಿ ಕುಡಿಯಬಾರದು.
ಲವಣಾಂಶ ಹಾಗೂ ಇತರೆ ಅಂಶಗಳು ದೇಹದ ಪ್ರತಿಭಾಗಕ್ಕೂ ತಲುಪುವುದಕ್ಕೆ ಸಮಯ ಹಿಡಿಯುತ್ತದೆ. ಒಂದು ವೇಳೆ ನಿಂತುಕೊಂಡು ಕುಡಿದರೆ ಒಮ್ಮೆಲೇ ಹೋಗುತ್ತದೆ. ಆದ್ದರಿಂದ ಕುಳಿತುಕೊಂಡು ನಿಧಾನಕ್ಕೆ ಕುಡಿಯಬೇಕು. ಈ ರೀತಿ ಮಾಡುವುದರಿಂದ ದೇಹದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ.