ಭಾರತದಲ್ಲಿ ಬೇರೆ ಬೇರೆ ಧರ್ಮದವರು ನೆಲೆಸಿದ್ದಾರೆ. ಹೀಗಾಗಿ ನಾವೆಲ್ಲ ಭಾರತೀಯರೇ ಹೊರತು ಹಿಂದೂಗಳಲ್ಲ. ಹಾಗೆಯೇ ಇದು ಹಿಂದೂ ರಾಷ್ಟ್ರವಲ್ಲ ಎಂದು ಸಾಹಿತಿ ಕಮಲಾ ಹಂಪನಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕನ್ನಡ ಜನಶಕ್ತಿ ಕೇಂದ್ರ ಹಾಗೂ ಕಲಬುರಗಿಯ ಸಬರದ ಬಸಪ್ಪ ಸ್ಮಾರಕ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.
ಭಾರತದಲ್ಲಿ ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಸೇರಿದಂತೆ ವಿವಿಧ ಧರ್ಮದವರು ನೆಲೆಸಿದ್ದಾರೆ. ಇವರ್ಯಾರು ಹಿಂದುಗಳಲ್ಲ. ಹೀಗಾಗಿ ನಾವೆಲ್ಲರೂ ಭಾರತೀಯರೇ ಹೊರತು ಹಿಂದೂಗಳಲ್ಲ. ಶೇ.3ರಷ್ಟು ಮಂದಿ ಮಾತ್ರ ಹಿಂದೂ ರಾಷ್ಟ್ರ ಎಂದು ಕರೆದುಕೊಂಡರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನುಡಿದರು.
ಪ್ರಮಾಣ ಪತ್ರಗಳಲ್ಲಿ ಹಿಂದೂ ಧರ್ಮ ಎಂದು ನಮೂದಿಸದೆ ಭಾರತೀಯರು ಎಂದು ಬರೆಸಬೇಕು ಎಂದು ಅಭಿಪ್ರಾಯಪಟ್ಟ ಕಮಲಾ ಹಂಪನಾ, ನಮ್ಮ ಧರ್ಮವೇ ಶ್ರೇಷ್ಠ ಎಂದು ತೋರಿಸಲು ಹೋಗುವವರು ಉಗ್ರವಾದಿಗಳು ಎಂದು ಹೇಳಿದರು.