alex Certify ನಾವು ಯಾರನ್ನೂ ಹೈಜಾಕ್ ಮಾಡಿಲ್ಲ; ತಾವಾಗಿಯೇ ಪಕ್ಷಕ್ಕೆ ಬರುತ್ತೇವೆ ಎಂದವರನ್ನು ಬೇಡ ಎಂದಿಲ್ಲ; ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾವು ಯಾರನ್ನೂ ಹೈಜಾಕ್ ಮಾಡಿಲ್ಲ; ತಾವಾಗಿಯೇ ಪಕ್ಷಕ್ಕೆ ಬರುತ್ತೇವೆ ಎಂದವರನ್ನು ಬೇಡ ಎಂದಿಲ್ಲ; ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಡಿ.ಕೆ.ಶಿ

ಬೆಂಗಳೂರು: ಮನಗೂಳಿ ಅವರು ನಮ್ಮನ್ನು ಭೇಟಿಯಾಗಿ ಮಾತನಾಡಿದ್ದು ನಿಜ, ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯವೂ ನಮಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಮ್ಮ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಯವರು ನೋವಿನಿಂದ ಮಾತನಾಡುತ್ತಿದ್ದಾರೆ, ನಮ್ಮ ಪಕ್ಷದವರು ಕಾಂಗ್ರೆಸ್ ಗೆ ಹೋಗಿ ಅಭ್ಯರ್ಥಿಯಾದರಲ್ಲ ಎಂಬ ನೋವು ಅವರಿಗಿದೆ ಹಾಗಾಗಿ ಹೆಚ್ ಡಿ ಕೆ ಮಾತಿಗೆ ನಮಗೆ ಬೇಸರವಿಲ್ಲ. ಆದರೆ ಮನಗೂಳಿಯವರನ್ನು ನಾವು ಹೈಜಾಕ್ ಮಾಡಿಲ್ಲ. ಅವರಾಗಿಯೇ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವುದಾಗಿ ಹೇಳಿದರು. ನಮ್ಮ ಪಕ್ಷಕ್ಕೆ ಬರುವವರಿಗೆ ನಾವು ಬೇಡ ಎನ್ನಲ್ಲ ಎಂದು ಹೇಳಿದರು.

ಮನಗೂಳಿ ನಮ್ಮನ್ನು ಭೇಟಿಯಾಗಿದ್ದರು. ಈ ವಿಚಾರ ನಮಗೆ ಹಾಗೂ ಮನಗೂಳಿ ಪುತ್ರ ಅಶೋಕ್ ಗೂ ಗೊತ್ತಿದೆ. ಈ ವಿಚಾರವನ್ನು ನಾವು ಬಹಿರಂಗವಾಗಿ ಹೇಳಿದ್ದೇವೆ ಹೊರತು ಗೌಪ್ಯವಾಗಿ ಹೇಳಿಲ್ಲ. ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಗತ್ಯವಿದ್ದರೆ ಅಶೋಕ್ ಮನಗೂಳಿ ಅವರನ್ನು ಕೇಳಿ ಎಂದು ತಿರುಗೇಟು ನೀಡಿದ್ದಾರೆ.

ಎಂ.ಸಿ. ಮನಗೂಳಿ 15 ದಿನಗಳ ಹಿಂದೆ ನನ್ನನ್ನು ಭೇಟಿಯಾಗಿದ್ದರು ಎಂದರೆ ನಾನು ಕ್ಯಾಲೆಂಡರ್ ತೆಗೆದು ಲೆಕ್ಕಹಾಕಿ ಹೇಳಿಲ್ಲ, ಅವರು ನಿಧನ ಹೊಂದುವ ಕೆಲ ದಿನಗಳ ಹಿಂದೆ ಭೇಟಿ ಮಾಡಿದ್ದರು. ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ನಮ್ಮ ಪಕ್ಷಕ್ಕೂ ಸಾಕಷ್ಟು ಸಂಖ್ಯಾಬಲವಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...