ಗಂಗಾವತಿ : ನಾವು ಮೊಟ್ಟೆ ತಿಂದು ಸ್ನಾನ ಮಾಡಿ ಬಂದು ನಿಮಗೆ ದಕ್ಷಿಣೆ ಹಾಕಿಲ್ವಾ? ಮಠ, ದೇವಸ್ಥಾನಗಳಿಗೆ ಬಂದು ಪೂಜೆ ಮಾಡಿಲ್ವಾ? ಎಂದು ವಿದ್ಯಾರ್ಥಿನಿಯೊಬ್ಬಳು ಮಠಾಧೀಶರನ್ನು ಪ್ರಶ್ನಿಸಿದ್ದಾಳೆ.
ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರವು, ಇತ್ತೀಚೆಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸುವ ಕಾರ್ಯಕ್ರಮ ಜಾರಿಗೊಳಿಸುತ್ತು. ಆದರೆ, ಮೊಟ್ಟೆ ವಿತರಣೆಗೆ ಹಲವು ಮಠಾಧೀಶರು ಸೇರಿದಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ನಮಗೆ ಮೊಟ್ಟೆ ಬೇಕು ಎಂದು ವಿದ್ಯಾರ್ಥಿನಿ ಗುಡುಗಿದ್ದಾಳೆ. ಅಲ್ಲದೇ, ಮಠಾಧೀಶರಿಗೂ ಸವಾಲು ಹಾಕಿದ್ದಾಳೆ.
ಗಂಗಾವತಿ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಈ ರೀತಿ ಮಠಾಧೀಶರಿಗೆ ಸವಾಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊಟ್ಟೆ ತಿನ್ನಬೇಡಿ ಎಂದರೆ ಹುಷಾರ್! ತಿನ್ನುವುದು ಬೇಡ ಎಂದರೆ, ನಾವು ಮಠದಲ್ಲಿಯೇ ಬಂದು ತಿಂದು ತೋರಿಸುತ್ತೇವೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.