ದೇವಸ್ಥಾನಕ್ಕೆ ಹೋದ ಕೂಡಲೇ ನಾವು ಮೊದಲು ದೇವರನ್ನು ಕಂಡಾಗ ನಮಸ್ಕಾರ ಮಾಡುತ್ತೇವೆ. ಇದು ನಮಗೇ ತಿಳಿಯದ ಹಾಗೆ ನಾವು ಮಾಡುವ ಒಂದು ಕ್ರಿಯೆ. ದೇವರನ್ನು ಕಂಡ ಕೂಡಲೇ ನಾವು ನಮಸ್ಕಾರ ಮಾಡುವುದೇಕೆ? ಎಂದಾದರೂ ಯೋಚಿಸಿದ್ದೀರಾ?
ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ ಅಲ್ಲವೇ? ಈ ಗುರುತ್ವಾಕರ್ಷಣೆ ಸೆಳೆತದ, ಆಕರ್ಷಣೆಯ ಸಂಕೇತ. ಕೆಳಗೆ ಇಳಿಬಿಟ್ಟ ನಮ್ಮ ಕೈಗಳು ಲೌಕಿಕ ಸೆಳೆತಕ್ಕೆ, ಆಕರ್ಷಣೆಗೆ ಒಳಗಾಗುವುದನ್ನು ಸೂಚಿಸುತ್ತದೆ.
ಕೈಗಳನ್ನು ಮೇಲೆತ್ತಿ ನಾವು ದೇವರಿಗೆ ನಮಸ್ಕರಿಸಿದಾಗ, ಈ ಲೌಕಿಕದ ಸೆಳೆತ ಮತ್ತು ಆಕರ್ಷಣೆಯಿಂದ ನಮ್ಮನ್ನು ಪಾರು ಮಾಡುವ, ದೈವೀ ಶಕ್ತಿಯ ಮೊರೆ ಹೋಗುವ, ಪಾರಮಾರ್ಥದ ಕಡೆ ನಮ್ಮನ್ನು ಕರೆದೊಯ್ಯುಬೇಕಾಗಿ ಪ್ರಾರ್ಥನೆ ಮಾಡುವುದೇ ನಮಸ್ಕಾರ ಮಾಡುವ ಹಿಂದಿನ ಉದ್ದೇಶವಾಗಿದೆ.