alex Certify ನಾವು ದಿನನಿತ್ಯ ಸೇವಿಸುವ ಈ ಪದಾರ್ಥಗಳೇ ನಮ್ಮ ಆರೋಗ್ಯದ ಶತ್ರು..! ಹೈ ಬಿಪಿಗೆ ಕಾರಣವಾಗುತ್ತೆ ಈ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾವು ದಿನನಿತ್ಯ ಸೇವಿಸುವ ಈ ಪದಾರ್ಥಗಳೇ ನಮ್ಮ ಆರೋಗ್ಯದ ಶತ್ರು..! ಹೈ ಬಿಪಿಗೆ ಕಾರಣವಾಗುತ್ತೆ ಈ ಅಂಶ

ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ತರುವಂತಹ ಸಮಸ್ಯೆ.  ಇದು ಹೃದಯಾಘಾತಕ್ಕೂ ಕಾರಣವಾಗುತ್ತದೆ. ಈ ಅಪಾಯಗಳನ್ನು ತಪ್ಪಿಸಲು ನೀವು ಬಯಸಿದರೆ, ಆಹಾರ ಮತ್ತು ಪಾನೀಯದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.

ನಮ್ಮ ದಿನನಿತ್ಯದ ಆಹಾರದಲ್ಲಿ ರಕ್ತದೊತ್ತಡ ಹೆಚ್ಚಿಸುವಂತಹ ಕೆಲವೊಂದು ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಅರಿವಿಲ್ಲದೆಯೇ ತಿನ್ನುವ ಈ ಆಹಾರಗಳು ಹೈ ಬಿಪಿಗೆ ಕಾರಣವಾಗುತ್ತವೆ. ಆ ವಸ್ತುಗಳು ಯಾವುವು? ಅವುಗಳ ಅಪಾಯವೇನು ಅನ್ನೋದನ್ನು ನೋಡೋಣ.

ಕಾಫಿ: ಅಧಿಕ ರಕ್ತದೊತ್ತಡದ ರೋಗಿಗಳು ಕಾಫಿ ಕುಡಿಯುವುದು ಹಾನಿಕಾರಕ. ಕಾಫಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಕೆಫೀನ್ ಮತ್ತು ಸಕ್ಕರೆ ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಅಧಿಕ ರಕ್ತದೊತ್ತಡ ಇರುವವರು ಕಾಫಿ ಕುಡಿಯುವುದನ್ನು ತಪ್ಪಿಸಬೇಕು.

ಉಪ್ಪಿನಕಾಯಿ: ಅಧಿಕ ಬಿಪಿ ರೋಗಿಗಳ ಆರೋಗ್ಯಕ್ಕೆ ಉಪ್ಪಿನಕಾಯಿ ತಿನ್ನುವುದು ಒಳ್ಳೆಯದಲ್ಲ. ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚು ಇರುತ್ತದೆ, ಇದು ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಧಿಕ ಸೋಡಿಯಂ ರಕ್ತವನ್ನು ದುರ್ಬಲಗೊಳಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ.

ಸಂಸ್ಕರಿಸಿದ ಆಹಾರ: ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚು ಮಾಡಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಸಂಸ್ಕರಿಸಿದ ಮಾಂಸವನ್ನು ತಿನ್ನಬಾರದು. ಸ್ಯಾಂಡ್‌ವಿಚ್‌ ಮತ್ತು ಬರ್ಗರ್‌ಗಳಂತಹ ತಿನಿಸುಗಳಿಂದ ದೂರವಿರಬೇಕು.

ಪ್ಯಾಕ್ ಮಾಡಿದ ಆಹಾರ: ಚಿಪ್ಸ್ ಇತ್ಯಾದಿ ಪ್ಯಾಕ್ ಮಾಡಲಾದ ವಸ್ತುಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಬೇಗ ಹೆಚ್ಚಾಗಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಅಂತಹ ಆಹಾರವನ್ನು ಸೇವಿಸಬಾರದು.

ಸಿಹಿ ಅಥವಾ ಸಕ್ಕರೆ: ಅಧಿಕ ಸಕ್ಕರೆ ಅಥವಾ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ರಕ್ತದೊತ್ತಡವೂ ಹೆಚ್ಚಾಗಬಹುದು. ಸಿಹಿ ಪದಾರ್ಥಗಳು ತೂಕವನ್ನು ಹೆಚ್ಚಿಸುತ್ತವೆ, ಅಧಿಕ ತೂಕವು ಅಧಿಕ ಬಿಪಿಗೆ ಕಾರಣವಾಗುತ್ತದೆ. ಆದ್ದರಿಂದ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದರೆ, ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...