ಇತ್ತೀಚಿನ ದಿನಗಳಲ್ಲಿ ಎಮೋಜಿಗಳು ಸಿಕ್ಕಾಪಟ್ಟೆ ಬಳಕೆಯಾಗ್ತಿವೆ. ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಅನೇಕ ಮೆಸೇಜಿಂಗ್ ಆಪ್‌ಗಳಲ್ಲಿ ಎಮೋಜಿಗಳದ್ದೇ ಕಾರುಬಾರು. ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸ್ತೇವೆ.
ಎಮೋಜಿಗಳಿಂದಾಗಿಯೇ ನಮ್ಮ ಮೆಸೇಜ್‌ಗಳು ಆಕರ್ಷಕವಾಗಿ, ಲೈವ್ಲಿಯಾಗಿ ಕಾಣಿಸುತ್ತವೆ. ಕೆಲವೊಮ್ಮೆ ತೀರಾ ಅರ್ಜೆಂಟಿದೆ, ಮೆಸೇಜ್‌ಗೆ ರಿಪ್ಲೈ ಮಾಡಲು ಸಮಯವಿಲ್ಲ ಅಂತಾದಾಗಲೂ ಒಂದು ಎಮೋಜಿ ಕಳಿಸಿ ಸುಮ್ಮನಾಗುವವರೂ ಇದ್ದಾರೆ.
ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಾವು ಪ್ರತಿದಿನ ಲೆಕ್ಕವಿಲ್ಲದಷ್ಟು ಬಾರಿ ಬಳಸುವ ಈ ಎಮೋಜಿಗಳು ಯಾಕೆ ಹಳದಿ ಬಣ್ಣದಲ್ಲೇ ಇವೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ?
ಎಮೋಟಿಕಾನ್‌ಗಳ ಹಳದಿ ಬಣ್ಣಕ್ಕೆ ತಜ್ಞರು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ ಹಲವರು ಸಾಮಾಜಿಕ ಮಾಧ್ಯಮ ಸೈಟ್ Quora ನಲ್ಲಿ ಇದಕ್ಕೆ ಉತ್ತರಿಸಿದ್ದಾರೆ.
– ಹಳದಿ ಎಮೋಜಿಗಳು ಚರ್ಮದ ಟೋನ್‌ಗೆ ಹೊಂದಿಕೆಯಾಗುವುದರಿಂದ ನಮ್ಮ ಗುರುತನ್ನು ಸೂಚಿಸಲು ಆ ಬಣ್ಣವನ್ನು ಬಳಸಿದ್ದಾರೆ. ನಮ್ಮ ಚರ್ಮದ ಬಣ್ಣ ಹಳದಿ ಬಣ್ಣಕ್ಕೆ ಮುಖ್ಯ ಕಾರಣ. ಹಳದಿ ಬಣ್ಣದಿಂದಾಗಿ ಅನೇಕರು ಸಂಪರ್ಕಕ್ಕೆ ಸಿಗ್ತಾರೆ ಅನ್ನೋದು ಕೆಲವರ ಅಭಿಪ್ರಾಯ.
– ಒಬ್ಬ ವ್ಯಕ್ತಿಯು ನಗುವಾಗ ಅವನ ಅಥವಾ ಅವಳ ಮುಖವು ಹಳದಿಯಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಎಮೋಜಿಗಳು ಮತ್ತು ಸ್ಮೈಲಿಗಳು ಹಳದಿಯಾಗಿರುತ್ತವೆ ಎಂದು ಕೆಲವರು ಬರೆದಿದ್ದಾರೆ.
– ಹಳದಿ ಬಣ್ಣವು ಸಂತೋಷವನ್ನು ಪ್ರತಿನಿಧಿಸುತ್ತದೆ ಎಂಬುದು ಇನ್ನು ಕೆಲವರ ವಾದ. – ಮುಖದ ಭಾವನೆಗಳು ಹಳದಿ ಬಣ್ಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ, ಹಾಗಾಗಿಯೇ ಎಮೋಜಿಗಳು ಮತ್ತು ಸ್ಮೈಲಿಗಳೆಲ್ಲ ಹಳದಿ ಎಂದು ಇನ್ನು ಕೆಲವರು ಅಭಿಪ್ರಾಯ ವ್ಯಕ್ಯಪಡಿಸಿದ್ದಾರೆ.