
ರಾಮ್ಸ್ ರಂಗ ನಿರ್ದೇಶನದ ಬಹುನಿರೀಕ್ಷಿತ ಐರಾವನ್ ಚಿತ್ರ ನಾಳೆ ರಾಜ್ಯದ್ಯಂತ ತೆರೆಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಈ ಸಿನಿಮಾ ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ನಿರಂತರ ಗಣೇಶ್ ತಮ್ಮ ನಿರಂತರ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಕಾರ್ತಿಕ್ ಜಯರಾಮ್, ವಿವೇಕ್, ಹಾಗೂ ಅದ್ವಿತಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಂತರಾಜು ಕಡ್ಡಿಪುಡಿ ಅವರ ಸಂಭಾಷಣೆ, ದೇವೇಂದ್ರ ಛಾಯಾಗ್ರಹಣ, ಹರಿ ಸಂತೋಷ್ ಸಾಹಿತ್ಯವಿದ್ದು, ಎಸ್ ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ನೀಡಿದ್ದಾರೆ.
