ಆಗಸ್ಟ್ 26ರಂದು ರಾಜ್ಯದ್ಯಂತ ತೆರೆಯ ಮೇಲೆ ಬರಲಿರುವ ಧೀರನ್ ರಾಮ್ ಕುಮಾರ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ‘ಶಿವ 143’ ಚಿತ್ರದ ಟ್ರೈಲರ್ ನಾಳೆ ಮಧ್ಯಾಹ್ನ 1:07ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದೆ.
ಈ ಚಿತ್ರವನ್ನು ಜಯಣ್ಣ ಫಿಲಂಸ್ ಬ್ಯಾನರ್ ನಡಿ ಜಯಣ್ಣ, ಬೋಗೇಂದ್ರ ಹಾಗೂ ಸೂರಿ ನಿರ್ಮಾಣ ಮಾಡಿದ್ದಾರೆ ರಾಮ್ ಕುಮಾರ್ ಪುತ್ರ ಧೀರೆನ್ ನಟನೆಯ ಮೊಟ್ಟಮೊದಲ ಸಿನಿಮಾ ಇದಾಗಿದ್ದು ಮಾನ್ವಿತಾ ಕಾಮತ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.