ಟಾಟಾ ಟಿಯಾಗೊ CNG ಮತ್ತು ಟಿಗೊರ್ CNG ಬೆಲೆಗಳನ್ನು ಅಂತಿಮವಾಗಿ ನಾಳೆ ಪ್ರಕಟಿಸಲಾಗುವುದು. ನಿಮಗೆ ತಿಳಿದಿರುವಂತೆ, ಟಾಟಾ ಮೋಟಾರ್ಸ್ ದೇಶದಲ್ಲಿ ತನ್ನ ಹೊಸ CNG ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.
ಹಲವು ದಿನಗಳಿಂದ ಈ ಕಾರುಗಳ ಬಗ್ಗೆ ಹೈಪ್ ಹೆಚ್ಚಾಗಿದ್ದು, ಕಾರುಗಳನ್ನು ಯಾವಾಗ ಪ್ರಾರಂಭಿಸಲಾಗುವುದು ಎಂದು ಇನ್ನು ನಿಖರವಾಗಿ ಹೇಳಿಲ್ಲ. ಆದರೆ ಟಿಗೊರ್ CNG ಸೆಡಾನ್ ಅನ್ನು ಡೀಲರ್‌ಶಿಪ್ ಸ್ಟಾಕ್‌ಯಾರ್ಡ್‌ನಲ್ಲಿ ಗುರುತಿಸಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಇದರಿಂದ ಟಾಟಾ ಕಂಪನಿ ಹೊಸ CNG ಕಾರುಗಳ ವಿತರಣೆಯನ್ನು ಸಹ ಪ್ರಾರಂಭಿಸಿದ್ದಾರೆ ಎಂದು ಖಚಿತವಾಗಿದೆ.
ಟಾಟಾ ಟಿಯಾಗೊ ಮತ್ತು ಟಾಟಾ ಟಿಗೊರ್‌ನ CNG ರೂಪಾಂತರಗಳು 2020ರಲ್ಲಿ ಬಿಡುಗಡೆಯಾದ ಪೆಟ್ರೋಲ್ ಎಂಜಿನ್ ಚಾಲಿತ ಮಾದರಿಗಳನ್ನೆ ಆಧರಿಸಿವೆ. ಇದರರ್ಥ CNG ಬ್ಯಾಡ್ಜಿಂಗ್ ಹೊರತುಪಡಿಸಿ ಪ್ರಸ್ತುತ ಇರುವ ಟಿಯಾಗೊ ಹಾಗೂ ಟಿಗೋರ್ ಲುಕ್ ಗಳೆ ಈ ಕಾರ್ ಗಳಿಗಿದೆ.
ಹೊಸ CNG ಕಾರುಗಳ ಇಂಟೀರಿಯರ್ ಕೂಡ ಪ್ರಸ್ತುತ ಇರುವ ಮಾದರಿಗಳಂತೆಯೆ ಇರುತ್ತದೆ. ಇದರರ್ಥ ಡ್ಯಾಶ್‌ಬೋರ್ಡ್ ಮತ್ತು ಡೋರ್ ಪ್ಯಾನೆಲ್‌ಗಳಿಗೆ ಬೂದು ಬಣ್ಣದ ಫಿನಿಷಿಂಗ್ ನೀಡಲಾಗಿದೆ. ಹೊಸ ಫೀಚರ್ ಅಂದ್ರೆ, ಇನ್ಫೋಟೈನ್‌ಮೆಂಟ್ ಸಿಸ್ಟಂನ ಕೆಳಗೆ CNG ಬಟನ್ ಫಿಕ್ಸ್ ಮಾಡಲಾಗಿದೆ.
ಇಂಟೀರಿಯರ್ ವೈಶಿಷ್ಟ್ಯಗಳನ್ನ ನೋಡುವುದಾದರೆ ಟಾಟಾ CNG ಕಾರುಗಳು ಪವರ್ ವಿಂಡೋಸ್, ವಿದ್ಯುತ್-ಹೊಂದಾಣಿಕೆಯ ORVM ಗಳು, ಟಿಲ್ಟ್-ಹೊಂದಾಣಿಕೆಯ ಸ್ಟೀರಿಂಗ್ ವೀಲ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿಯರ್ ಪಾರ್ಕಿಂಗ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಟಿಗೊರ್ ಸಿಎನ್‌ಜಿ ಮತ್ತು ಟಿಯಾಗೊ CNG 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರಿಂದ 85 ಬಿಎಚ್‌ಪಿ ಮತ್ತು 113 ಎನ್‌ಎಂ ದೊರೆಯುತ್ತದೆ. ಈ ಮಾದರಿಗಳನ್ನು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ನೀಡುವ ಸಾಧ್ಯತೆಯಿದೆ