
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಮೆಹರ್ ರಮೇಶ್ ನಿರ್ದೇಶನದ ಬಹು ನಿರೀಕ್ಷಿತ ‘ಭೋಲಾ ಶಂಕರ್’ ಚಿತ್ರ ಇದೇ ತಿಂಗಳು ಆಗಸ್ಟ್ ೧೧ ರಂದು ತೆರೆ ಮೇಲೆ ಅಪ್ಪಳಿಸಲಿದ್ದು, ಮೆಗಾಸ್ಟಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೂ ಮುಂಚೆ ನಾಳೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ನೆರವೇರಿಸುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಏ ಕೆ ಎಂಟರ್ಟೈನ್ಮೆಂಟ್ ಹಾಗೂ ಕ್ರಿಯೇಟಿವ್ ಕಮರ್ಷಿಯಲ್ ಲಾಂಛನದಲ್ಲಿ ಕೆ ಎಸ್ ರಾಮರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಕೀರ್ತಿ ಸುರೇಶ್ ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಹತೀ ಸ್ವರಸಾಗರ್ ಸಂಗೀತ ಸಂಯೋಜನೆ ನೀಡಿದ್ದಾರೆ.
