ಬೆಂಗಳೂರು: ನಾಳೆ ಜುಲೈ 5ರಿಂದ ಅನ್ ಲಾಕ್ 3.0 ಜಾರಿಗೆ ಬರಲಿದ್ದು, ರಾಜ್ಯಾದ್ಯಂತ ದೇವಾಲಯ, ಮಠ, ಮಂದಿರ, ಮಸೀದಿ, ಚರ್ಚ್ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ.
ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ತೀರ್ಥ-ಪ್ರಸಾದ ವಿತರಣೆ ಹಾಗೂ ವಿಶೇಷ ಪೂಜೆಗಳಿಗೆ ಯಾವುದೇ ಅವಕಾಶಗಳಿರುವುದಿಲ್ಲ. ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಸ್ಯಾನಿಟೈಸ್ ಸಿಂಪಡಿಸಲಾಗುತ್ತಿದೆ. ರಾಜಧಾನಿ ಬೆಂಗಳೂರಿನ ಬನಶಂಕರಿ, ಕಾಡುಮಲ್ಲೇಶ್ವರ ದೇವಾಲಯ ಸೇರಿದಂತೆ ರಾಜ್ಯದ ಪ್ರಮುಖ ದೇವಾಲಯಗಳಾದ ಧರ್ಮಸ್ಥಳ, ಮಲೈಮಹದೇಶ್ವರ ಸೇರಿದಂತೆ ಹಲವು ದೇವಾಲಯಗಳಲ್ಲಿ ಸಿದ್ಧತೆ ನಡೆದಿದೆ. ಆದರೆ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಮಾತ್ರ ಅವಕಾಶವಿಲ್ಲ.
ಎಟಿಎಂನಲ್ಲಿ ಹರಿದ ನೋಟು ಸಿಕ್ಕಿದ್ರೆ ಚಿಂತೆ ಬೇಡ..! ಬದಲಿಸುವ ಕುರಿತು ಇಲ್ಲಿದೆ ಮಾಹಿತಿ
ಇನ್ನೂ ಒಂದು ವಾರಗಳ ಕಾಲ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸುತ್ತಮುತ್ತಲ ರಾಜ್ಯಗಳ ಚಿತ್ರಣ ನೋಡಿಕೊಂಡು ಒಂದು ವಾರದ ಬಳಿಕ ದರ್ಶನಕ್ಕೆ ಅನುವು ಮಾಡಿಕೊಡಲು ನಿರ್ಧರಿಸುವುದಾಗಿ ಶ್ರೀಮಠದ ಪರ್ಯಾಯ ಅದಮಾರು ಈಶಪ್ರಿಯ ತೀರ್ಥರು ತಿಳಿಸಿದ್ದಾರೆ.