
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ ಟ್ವೆಂಟಿ ಸರಣಿ ನಿನ್ನೆಯಷ್ಟೆ ಮುಕ್ತಾಯವಾಗಿದ್ದು, ನಾಳೆಯಿಂದ ಏಕದಿನ ಸರಣಿ ಪ್ರಾರಂಭವಾಗಲಿದೆ.
ಭಾರತ ತಂಡ ಈಗಾಗಲೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಈ ಎರಡೂ ತಂಡಗಳ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಭರ್ಜರಿಯಾಗಿ ಗೆದ್ದಿದೆ.
ನಾಳೆಯಿಂದ ಶುರುವಾಗಲಿರುವ 3ಏಕದಿನ ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಶಿಖರ್ ಧವನ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಏಕದಿನ ಸರಣಿಯ ಭಾರತ ತಂಡ ಇಂತಿದೆ
ಶಿಖರ್ ಧವನ್ ನಾಯಕ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಶುಬ್ ಮನ್ ಗಿಲ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ಶಾರ್ದೂಲ್ ಠಾಕೂರ್, ಶಾಬಾಜ್ ಅಹ್ಮದ್, ದೀಪಕ್ ಚಹರ್, ಕುಲ್ ದೀಪ್ ಯಾದವ್, ಆವೇಶ್ ಖಾನ್, ರವಿ ಬಿಷ್ಣೋಯಿ, ಮುಹಮ್ಮದ್ ಸಿರಾಜ್ ಸೇರಿದಂತೆ ಮುಖೇಶ್ ಕುಮಾರ್ ಹಾಗೂ ರಜತ್ ಭಾಟಿಯಾ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುತ್ತಿರುವ ಸಂತಸದಲ್ಲಿದ್ದಾರೆ.