ಈ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದು, ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಏಕದಿನ ಸರಣಿಗೆ ಸಜ್ಜಾಗಿದೆ. ಈ ಬಾರಿಯ t20 ವಿಶ್ವಕಪ್ ನಲ್ಲಿ ತನ್ನ ಹೋಂ ಗ್ರೌಂಡ್ ನಲ್ಲಿ ಸೆಮಿಫೈನಲ್ ಗೂ ಬರದೇ ಹೊರಗುಳಿದ ಆಸ್ಟ್ರೇಲಿಯಾ ತಂಡಕ್ಕೆ ಸೇಡು ತೀರಿಸಿಕೊಳ್ಳಲು ಇದೊಂದು ಅವಕಾಶವಾಗಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರ ಪಟ್ಟಿ ಇಂತಿದೆ
ಆಸ್ಟ್ರೇಲಿಯಾ ತಂಡ; ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕೂಸ್ ಸ್ಟೋಯ್ನೀಸ್, ಅಲೆಕ್ಸ್ ಕೇರಿ, ಮಿಚೆಲ್ ಸ್ಟಾರ್ಕ್, ಕ್ಯಾಮರನ್ ಗ್ರೀನ್, ಆ್ಯಡಂ ಝಂಪಾ, ಜೋಶ್ ಹ್ಯಾಜಲ್ ವುಡ್, ಮಿಚೆಲ್ ಮಾರ್ಶ್, ಟ್ರಾವಿಸ್ ಹೆಡ್ ಆಶ್ಟನ್ ಅಗರ್, ಲಾಬುಶ್ಚಗ್ನೆ, ಸೀನ್ ಅಬ್ಬೋಟ್
ಇಂಗ್ಲೆಂಡ್ ತಂಡ ; ಜಾಸ್ ಬಟ್ಲರ್, ಫಿಲಿಫ್ ಸಾಲ್ಟ್, ಡೇವಿಡ್ ಮಲಾನ್, ಜೇಮ್ಸ್ ವಿನ್ಸ್, ಜೇಸನ್ ರಾಯ್, ಸ್ಯಾಮ್ ಕರನ್, ಮೋಹಿನ್ ಅಲಿ, ಲಿಯಮ್ ಡವ್ಸನ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ಜೊರ್ದನ್, ಲ್ಯೂಕ್ ವುಡ್, ಒಲ್ಲಿ ಸ್ಟೋನ್ ಸೇರಿದಂತೆ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.