ಕೆಲ ದಿನಗಳ ಹಿಂದಷ್ಟೇ ಸೂರ್ಯ ಗ್ರಹಣ ಸಂಭವಿಸಿದ್ದು, ಇದೀಗ ಅಕ್ಟೋಬರ್ 8ರ ನಾಳೆ ಚಂದ್ರ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣ ವೀಕ್ಷಿಸಲು ಬಯಸುವವರಿಗೆ ಬೆಂಗಳೂರಿನ ನೆಹರು ತಾರಾಲಯ ಕೆಲವೊಂದು ಸಲಹೆಗಳನ್ನು ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗ್ರಹಣಗ್ರಸ್ತ ಚಂದ್ರ ಸಂಜೆ 5:49ಕ್ಕೆ ಉದಯಿಸಲಿದ್ದು, ಪಾರ್ಶ್ವ ಚಂದ್ರಗ್ರಹಣ ಸಂಜೆ 6:19ಕ್ಕೆ ಕೊನೆಗೊಳ್ಳಲಿದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ಅಥವಾ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ.
ರಾಜ್ಯದ ಮಂಗಳೂರು, ಮೈಸೂರು, ಬಳ್ಳಾರಿ, ಧಾರವಾಡ, ಕಾರವಾರ, ರಾಯಚೂರು, ಬಾಗಲಕೋಟೆ ಮತ್ತು ಚಾಮರಾಜನಗರದಲ್ಲಿ ಗ್ರಹಣ ಗೋಚರಿಸಲಿದ್ದು, ನೆಹರು ತಾರಾಲಯ ತನ್ನ ಯೂಟ್ಯೂಬ್ ಚಾನಲ್ ನಲ್ಲೂ ಚಂದ್ರ ಗ್ರಹಣ ದೃಶ್ಯಗಳ ನೇರ ಪ್ರಸಾರ ಮಾಡಲಿದೆ.