ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕಿಯರು ಬಟ್ಟೆ ತೊಳೆಯಲು ನದಿಗೆ ಹೋಗಿದ್ದರು ಎಂದು ಹೇಳಲಾಗಿದೆ.
ಹಮೀದ್ ನಗರದ ಈ ಬಾಲಕಿಯರು ಬಟ್ಟೆ ತೊಳೆಯಲೆಂದು ನದಿಗೆ ತೆರಳಿದ್ದು, ಈ ವೇಳೆ ಓರ್ವ ಬಾಲಕಿ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಮೂವರು ಬಾಲಕಿಯರೂ ಸಹ ನದಿಯಲ್ಲಿ ಮುಳುಗಿದ್ದಾರೆ.
ದಾರಿಹೋಕರೊಬ್ಬರು ಇದನ್ನು ನೋಡಿದ್ದು, ಕೂಡಲೇ ಬಾಲಕಿಯರ ರಕ್ಷಣೆಗಾಗಿ ಧಾವಿಸಿದ್ದಾರೆ. ಆದರೆ ನದಿಯ ಸೆಳೆತಕ್ಕೆ ಸಿಲುಕಿದ ಅವರು ಸಹ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.