ನಾಯಿಯನ್ನು ಎಲ್ರೂ ಇಷ್ಟಪಡ್ತಾರೆ, ಮುದ್ದಾಗಿ ಸಾಕ್ತಾರೆ. ಇದರಿಂದ ಶ್ವಾನಕ್ಕೆ ಮಾತ್ರವಲ್ಲ ನಿಮಗೂ ಲಾಭವಿದೆ ಎಂಬುದು ನಿಮಗೂ ಗೊತ್ತ ? ನಾಯಿ ಸಾಕಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತದೆ. ಸ್ವೀಡನ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಇದು ಪತ್ತೆಯಾಗಿದೆ. 3.4 ಮಿಲಿಯನ್ ಜನರನ್ನು ಈ ಕುರಿತಂತೆ ಹಿಂದೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಳೆದ 12 ವರ್ಷಗಳಿಂದ ಅವರೆಲ್ಲ ನಾಯಿಯನ್ನು ಸಾಕಿದ್ದಾರೆ. ವಿಶೇಷ ಅಂದ್ರೆ ಒಬ್ಬರಲ್ಲೂ ಹೃದಯದ ಸಮಸ್ಯೆಯಿಲ್ಲ. ನಾಯಿಯನ್ನು ಸಾಕದೇ ಇರುವವರಿಗೆ ಹೋಲಿಸಿದ್ರೆ ಇವರಲ್ಲಿ ಸಾವಿನ ಅಪಾಯ ಶೇ.20 ರಷ್ಟು ಕಡಿಮೆ ಇದೆ. ಅಷ್ಟೇ ಅಲ್ಲ ಯಾರು ಒಂಟಿಯಾಗಿರ್ತಾರೋ ಅಂಥವರಂತೂ ನಾಯಿ ಸಾಕೋದು ಬೆಸ್ಟ್.
ಅವರಲ್ಲಿ ಸಾವಿನ ಅಪಾಯ ಶೇ.33 ರಷ್ಟು ಕಡಿಮೆಯಾಗಿರುತ್ತದೆ. ಸ್ಟ್ರೋಕ್, ಹೃದಯಾಘಾತದಂತಹ ಸಮಸ್ಯೆಗಳು ಬರುವುದಿಲ್ಲ. ಅಷ್ಟೇ ಅಲ್ಲ ಯಾರು ಪೆಟ್ಸ್ ಸಾಕಿರುತ್ತಾರೋ ಅವರು ದೈಹಿಕವಾಗಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಏಕಾಂಗಿತನ ಬಾಧಿಸುವುದಿಲ್ಲ, ಜೀವನಶೈಲಿ ಉತ್ತಮವಾಗಿರುತ್ತದೆ.
ಪತಿ, ಮಕ್ಕಳು ಸಾಥ್ ಇಲ್ಲದೇ ಒಂಟಿಯಾಗಿರುವವರಿಗೆ ನಾಯಿಗಳನ್ನು ಸಾಕುವುದರಿಂದ ಭಾವನಾತ್ಮಕ ಬೆಂಬಲ ಕೂಡ ದೊರೆಯುತ್ತದೆ. ನೀವು ಯಾವುದೇ ಅಪಾಯಕಾರಿ ಖಾಯಿಲೆಯಿಂದ ಬಳಲ್ತಾ ಇದ್ರೆ ಕೇವಲ ವೈದ್ಯಕೀಯ ಚಿಕಿತ್ಸೆ ಪಡೆಯೋದು ಮಾತ್ರವಲ್ಲ, ಮನೆಯಲ್ಲಿ ಮುದ್ದಾದ ನಾಯಿಯೊಂದನ್ನು ಸಾಕಿ. ಇದರಿಂದ ಒಂದು ಮೂಕ ಪ್ರಾಣಿಗೆ ಆಶ್ರಯ ದೊರೆತಂತಾಗುತ್ತದೆ, ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.