ತವಾ ಅಡುಗೆ ಮನೆಯಲ್ಲಿ ಬಹಳ ಬಳಕೆಯಾಗುವ ಪಾತ್ರೆ. ಹಿಂದೆ ನಾನ್ಸ್ಟಿಕ್ ಬಾಣಲೆ ಇರಲಿಲ್ಲ. ಹೆಂಚಿನ ತವಾವನ್ನು ಬೂದಿ ಅಥವಾ ಇದ್ದಿಲು ಹಾಕಿ ಸ್ವಚ್ಚಗೊಳಿಸುತ್ತಿದ್ದರು. ಆದ್ರೀಗ ಎಲ್ಲರ ಮನೆಯಲ್ಲೂ ನಾನ್ ಸ್ಟಿಕ್ ತವಾ ಇದ್ದೇ ಇರುತ್ತದೆ.
ಆದ್ರೆ ಈ ನಾನ್ ಸ್ಟಿಕ್ ತವಾವನ್ನು ಬೂದಿಯಿಂದ ಸ್ವಚ್ಚಗೊಳಿಸಲು ಸಾಧ್ಯವಿಲ್ಲ. 2 ನಿಮಿಷದಲ್ಲಿ ಸುಲಭವಾಗಿ ಈ ತವಾವನ್ನು ಸ್ವಚ್ಛಗೊಳಿಸುವ ವಿಧಾನವನ್ನು ನಾವು ಹೇಳ್ತೇವೆ ನೋಡಿ.
ಮೊದಲು ನಾನ್ ಸ್ಟಿಕ್ ತವಾ ಅಥವಾ ಪ್ಯಾನನ್ನು ಗ್ಯಾಸ್ ಮೇಲಿಟ್ಟು ಒಲೆ ಹಚ್ಚಿ.
ನಂತ್ರ ಇದಕ್ಕೆ ಅರ್ಧ ಕಪ್ ವಿನಿಗರ್ ಹಾಕಿ. ಅದಕ್ಕೆ ಅರ್ಧ ಕಪ್ ನೀರು ಹಾಕಿ.
ಇದಾದ ನಂತ್ರ ಮನೆಯಲ್ಲಿರುವ ಯಾವುದೇ ಡಿಟರ್ಜಂಟ್ ಪೌಡರ್ ಹಾಕಿ ಕುದಿಯಲು ಬಿಡಿ. ಸಣ್ಣ ಮರದ ಸ್ಪೂನ್ ನಲ್ಲಿ ತವಾದ ಎಲ್ಲ ಭಾಗಗಳಿಗೂ ನೀರು ಹರಡುವಂತೆ ಮಾಡಿ.
ನಂತ್ರ ಗ್ಯಾಸ್ ಬಂದ್ ಮಾಡಿ ನೀರನ್ನು ಚೆಲ್ಲಿ. ಪಾತ್ರೆ ತೊಳೆಯುವ ಜೆಲ್ ನಲ್ಲಿ ಚೆನ್ನಾಗಿ ಸ್ಕ್ರಬ್ ಮಾಡಿ. ಆನಂತ್ರ ಸ್ವಚ್ಛ ನೀರಿನಲ್ಲಿ ತವಾವನ್ನು ತೊಳೆಯಿರಿ.
ನಾನ್ ಸ್ಟಿಕ್ ಪಾತ್ರೆಯನ್ನು ಎಂದೂ ಸ್ಟೀಲ್ ಸ್ಕ್ರಬ್ಬರ್ ನಲ್ಲಿ ತೊಳೆಯಬೇಡಿ.