ಹುಬ್ಬಳ್ಳಿ: ಹಿಜಾಬ್ ಧರಿಸಬೇಕು ಎಂದು ನಾನು ಹೇಳಿದ್ದೆ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ನೀಡಿಲ್ಲ, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಶಾಸಕ ಜಮೀರ್ ಅಹ್ಮದ್ ಸಮರ್ಥಿಸಿಕೊಂಡಿದ್ದಾರೆ.
ಹಿಜಾಬ್ ವಿವಾದ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ಸೂಚನೆಗೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್, ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಹೆಲ್ಮೆಟ್ ಧರಿಸುವಂತೆಯೇ ಹಿಜಾಬ್ ಧರಿಸಬೇಕು. ಹೆಲ್ಮೆಟ್ ಹೇಗೆ ಸೇಫ್ಟಿ ಎಂದು ಪರಿಗಣಿಸುತ್ತಾರೋ ಹಾಗೇ ಹಿಜಾಬ್ ಕೂಡ ಸೇಫ್ಟಿ ನೀಡುತ್ತೆ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಹೆಲ್ಮೆಟ್ ನ್ನು ಕೆಲ ಬೈಕ್ ಸವಾರರೇ ಹಾಕಲ್ಲ, ಅದೇ ರೀತಿ ಹಿಜಾಬ್ ನ್ನು ಕೂಡ ಬಹಳ ಜನರು ಹಾಕಲ್ಲ ಎಂದಿದ್ದೇನೆ. ಇದರಲ್ಲಿ ಕ್ಷಮೆ ಕೇಳುವ ಅಗತ್ಯವೆನಿದೆ ಎಂದಿದ್ದಾರೆ.
ಸಿದ್ಧರಾಮಯ್ಯ ಅವಧಿಯ ಲೂಟಿ ಬಗ್ಗೆ ಪ್ರಸ್ತಾಪ: HDK ಮಾಹಿತಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಹಿಜಾಬ್ ಕುರಿತು ಶಾಸಕ ಜಮೀರ್ ಅಹ್ಮದ್ ಹೇಳಿಕೆ ವಿವಾದಕ್ಕೀಡಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್, ಹಿಜಾಬ್ ಬಗ್ಗೆ ಯಾರೂ ಮಾತನಾಡದಂತೆ ಸೂಚಿಸಿದ್ದೇನೆ. ಆದಾಗ್ಯೂ ಜಮೀರ್ ಮಾತನಾಡಿದ್ದಾರೆ. ವಿವಾದಾತ್ಮಕ ಹೇಳಿಕೆ ಒಪ್ಪಲ್ಲ, ಜಮೀರ್ ತಮ್ಮ ಮಾತನ್ನು ವಾಪಸ್ ಪಡೆಯಲಿ, ಕ್ಷಮೆ ಯಾಚಿಸಲಿ ಎಂದು ಹೇಳಿದ್ದರು.