ಪಂಜಾಬ್ ಸಿಎಂ, ಚರಂಜಿತ್ ಸಿಂಗ್ ಚನ್ನಿ ಅವರ ಹೆಲಿಕಾಪ್ಟರ್ ಸೋಮವಾರ ಎರಡು ಬಾರಿ ಟೇಕ್ ಆಫ್ ಮಾಡುವುದರಿಂದ ತಡೆಯಲಾಗಿದ್ದು, ಹೆಲಿಕಾಪ್ಟರ್ ಹಾರಲು ಬಿಡದಿದ್ದಕ್ಕೆ ಕೋಪಗೊಂಡಿರುವ ಅವರು ಇಂದು ಸಹ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ರ್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯುವುದಕ್ಕಾಗಿ, ಬಿಜೆಪಿ ಈ ರೀತಿಯ ಉದ್ದೇಶಪೂರ್ವಕ ಪ್ರಯತ್ನ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಮತ್ತೆ ಆಕ್ಟೀವ್ ಆಯ್ತಾ ಡಿ-ಕಂಪನಿ…..? ದಾವುದ್ ಸಹೋದರಿ ಹಸೀನಾ ಪಾರ್ಕರ್ ನಿವಾಸದ ಮೇಲೆ ಇಡಿ ದಾಳಿ…..!
ನಾನೇನು ಭಯೋತ್ಪಾದಕನೇ, ನನನ್ನು ಕಂಡರೆ ಅವರು ಏಕೆ ಹೆದರುತ್ತಾರೆ? ಎಂದು ಚನ್ನಿ ಪ್ರಶ್ನಸಿದ್ದಾರೆ. ಬಿಜೆಪಿ ನನ್ನ ಜನಪ್ರಿಯತೆಗೆ ಹೆದರುತ್ತಿದೆ. ನನ್ನ ಹೆಲಿಕಾಪ್ಟರ್ ನಿಲ್ಲಿಸಿರುವ ಅವರಿಗೆ ನನ್ನನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಕುಡಿತದ ಚಟದ ಬಗ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ. ಭಗವಂತ್ ಮಾನ್ ಸಂಜೆ 6 ಗಂಟೆಯ ನಂತರ ಮದ್ಯವ್ಯಸನಿಯಾಗುತ್ತಾನೆ, ಎಂದಿರುವ ಅವರು ತಾಯಿಯ ಮೇಲೆ ಪ್ರಮಾಣ ಮಾಡಿದ ನಂತರವು ಮಾನ್, ಮದ್ಯದ ಚಟ ಬಿಡಲಿಲ್ಲ. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯವನ್ನ ಲೂಟಿ ಮಾಡಲು ಬಂದಿರುವ ಕಪ್ಪು ಬ್ರಿಟಿಷರು ಎಂದಿದ್ದಾರೆ.