ಬೆಂಗಳೂರು: ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತು ಧರಿಸಿ ಶಾಲಾ-ಕಾಲೇಜಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದರೂ ಕೆಲ ಶಾಲೆಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲೆಗೆ ಆಗಮಿಸುತ್ತಿದ್ದು, ಹಿಜಾಬ್ ತೆಗೆಯಲು ನಿರಾಕರಿಸಿದ್ದಾರೆ.
ಈ ನಡುವೆ ಬೆಳಗಾವಿ ಜಿಲ್ಲೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. ನಾನು ಹಿಜಾಬ್ ಪರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ, ನಾನು ಹಿಜಾಬ್ ಪರವಾಗಿದ್ದೇನೆ, ನನ್ನ ಮೇಲೆ ಬಲವಂತವಾಗಿ ಹಿಜಾಬ್ ಹೇರಿದರೆ ನಾನು ಹಿಜಾಬ್ ವಿರುದ್ಧ……ಭಾರತದ ಮಗಳು ಎಂದು ಬರೆದುಕೊಂಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.
ಮತ ಚಲಾಯಿಸಲು ಆಂಬುಲೆನ್ಸ್ ನಲ್ಲಿ ಬಂದ 70 ವರ್ಷದ ವೃದ್ಧೆ…!
ಗಡಿ ಜಿಲ್ಲೆ ಬೆಳಗಾವಿ ಸರ್ದಾರ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿ ಆಗಮಿಸಿದ್ದು, ಹಿಜಾಬ್ ತೆಗೆಯುವಂತೆ ಶಾಲಾ ಸಿಬ್ಬಂದಿಗಳು ಸೂಚಿಸಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ನಡುವೆ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮದಾರ್, ಹಿಜಾಬ್ ತೆಗೆಸುತ್ತಿರುವ ಸಿಬ್ಬಂದಿಗಳ ಕ್ರಮ ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಶಾಲೆಯ ಬಳಿಯಿರುವ ಪೊಲೀಸ್ ಸಿಬ್ಬಂದಿಗಳೊಂದಿಗೂ ವಾಗ್ವಾದಕ್ಕಿಳಿದಿದ್ದಾರೆ. ಈ ಎಲ್ಲಾ ಘಟನೆಗಳ ನಡುವೆ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟರ್ ಪೋಸ್ಟ್ ಗಮನ ಸೆಳೆದಿದೆ.