ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡಲು ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾನು ಕ್ರಿಶ್ಚಿಯನ್, ಹಾಗಾಗಿ ಧ್ವಜಾರೋಹರಣ ಹಾಗೂ ಗೌರವ ವಂದನೆಯನ್ನು ಸಲ್ಲಿಸುವುದಿಲ್ಲ ಎಂದು ಮುಖ್ಯೋಪಾಧ್ಯಾಯಿನಿ ತಮಿಳ್‌ಸೆಲ್ವಿ ಹೇಳಿದ್ದಾರೆ.
ಬಳಿಕ ಸಹಾಯಕ ಶಿಕ್ಷಕಿಯೇ ಧ್ವಜಾರೋಹಣ ನೆರವೇರಿಸಿದ್ದಾರೆ. ತಮಿಳ್‌ಸೆಲ್ವಿ ಈ ವರ್ಷ ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದು, ಅವರನ್ನು ಅಭಿನಂದಿಸುವ ಸಲುವಾಗಿ ಆಗಸ್ಟ್ 15 ರಂದು ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಮುಖ್ಯ ಶಿಕ್ಷಕಿಯ ವಿಡಿಯೋ ಸಹ ವೈರಲ್ ಆಗಿದೆ. ತನ್ನ ಇಂದ್ರಿಯ ನಿಗ್ರಹದ ಕ್ರಿಯೆಯ ಬಗ್ಗೆ ಆಕೆ ತರ್ಕಿಸಿದ್ದಾಳೆ. ತಾನು ಯಾಕೋಬಾ ಕ್ರಿಶ್ಚಿಯನ್ ಆಗಿದ್ದಕ್ಕೆ ಅದೇ ಕಾರಣವೆಂದು ಹೇಳಿದ್ದಾಳೆ. ತಾನು ಧ್ವಜಕ್ಕೆ ಯಾವುದೇ ಹಾನಿ ಅಥವಾ ಅಗೌರವ ತೋರುವುದಿಲ್ಲ ಎಂದಿದ್ದಾಳೆ.
“ನಾವು ದೇವರಿಗೆ ಮಾತ್ರ ನಮಸ್ಕರಿಸುತ್ತೇವೆ, ಬೇರೆ ಯಾರಿಗೂ ನಮಸ್ಕರಿಸುವುದಿಲ್ಲ. ಧ್ವಜವನ್ನು ಗೌರವಿಸುತ್ತೇವೆ ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾಳೆ. ಈ ಬಗ್ಗೆ ಧರ್ಮಪುರಿಯ ಮುಖ್ಯ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ. ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಧ್ವಜಾರೋಹಣ ಮಾಡಲು ನಿರಾಕರಿಸಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಅನಾರೋಗ್ಯದ ನೆಪವೊಡ್ಡಿ ರಜೆ ತೆಗೆದುಕೊಂಡಿದ್ದಾರಂತೆ. ಅದನ್ನೂ ಸಹ ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಮಿಳ್‌ಸೆಲ್ವಿ ಸರ್ಕಾರಿ ಸಂಸ್ಥೆಯಲ್ಲಿ ಒಂದು ಧರ್ಮದ ಬಗ್ಗೆ ಒಲವು ಪ್ರದರ್ಶಿಸಿ, ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳದೇ ಇರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.