alex Certify ‘ನಾಟು ನಾಟು’ ಹಾಡಿಗೆ ತಂದೆ – ಮಗನ ಸೂಪರ್ ಸ್ಟೆಪ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಟು ನಾಟು’ ಹಾಡಿಗೆ ತಂದೆ – ಮಗನ ಸೂಪರ್ ಸ್ಟೆಪ್; ವಿಡಿಯೋ ವೈರಲ್

ಇಂಟರ್ನೆಟ್‌ನಲ್ಲೀಗ ಆರ್ ಆರ್ ಆರ್ ಸಿನಿಮಾದ್ದೇ ಸದ್ದು ಮತ್ತು ಸುದ್ದಿ. 2023 ರ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ದಿನದಿಂದ ನಾಟು ನಾಟು ಹಾಡಿನ ರೀಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿವೆ.

ವಿದೇಶಿಗರು, ಸ್ಟಾರ್ಸ್ ಸೇರಿದಂತೆ ಸಾಮಾನ್ಯ ಜನರು ಈ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕ್ತಿದ್ದಾರೆ. ಇದೀಗ ಆನ್ ಲೈನ್‌ನಲ್ಲಿ ಹಂಚಿಕೊಳ್ಳಲಾದ ಮತ್ತೊಂದು ವೈರಲ್ ವೀಡಿಯೊದಲ್ಲಿ, ಟ್ಯಾಟೂ ಕಲಾವಿದ ಸಾಯಿ ಕಿಟ್ಟು ಅವರು ತಮ್ಮ ಮಗ ರೆಯಾನ್ಶ್ ಅವರೊಂದಿಗೆ ನಾಟು ನಾಟು ನೃತ್ಯವನ್ನು ಆನಂದಿಸುತ್ತಿರುವುದನ್ನು ನೋಡಬಹುದು.

RRR ಚಿತ್ರದ ನಾಟು ನಾಟು ಹಾಡು ಆಸ್ಕರ್ 2023 ರಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಗೆದ್ದಿದೆ. ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಸಾಹಿತಿ ಚಂದ್ರಬೋಸ್ ಟ್ರೋಫಿಯನ್ನು ಸ್ವೀಕರಿಸಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...